ವಿರಾಟ್ ಕೊಹ್ಲಿ ಎಬಿಡಿ ಜೊತೆಯಾಟವನ್ನು ಒಪ್ಪಿಕೊಳ್ಳದ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಕಂಡ ಶ್ರೇಷ್ಠ ಜೊತೆಯಾಟದ ಜೋಡಿ ಎಂದರೆ ಅದು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ರವರ ಜೋಡಿ. ಆರ್ಸಿಬಿ ತಂಡಕ್ಕೆ ಈ ಸೀಸನ್ ಅನ್ನು ಹೊರತುಪಡಿಸಿದರೇ ಹಿಂದಿನ ನಾಲ್ಕೈದು ಸೀಸನ್ ಗಳಲ್ಲಿ ಕೇವಲ ಇವರಿಬ್ಬರ ಜೊತೆಯಾಟದ ಮೇಲೆ ತಂಡದ ಭವಿಷ್ಯ ನಿರ್ಧಾರವಾಗುತ್ತಿತ್ತು. ಇವರಿಬ್ಬರು ಬಹುಬೇಗನೇ ಪೆವಿಲಿಯನ್’ಗೆ ಹೋದರು ಎಂದರೇ ಖಂಡಿತ ಆರ್ಸಿಬಿ ರನ್ ಗಳಿಸಲು ಪರದಾಡುವ ಪರಿಸ್ಥಿತಿ ಎದುರಾಗುತ್ತಿತ್ತು. ಅದರಂತೆಯೇ ಇವರಿಬ್ಬರು ಮೈದಾನದಲ್ಲಿ ಜೊತೆಯಾಟದಲ್ಲಿ ನೆಲೆಯೂರಿದ್ದಾರೆ ಎಂದರೇ ಯಾವುದೇ ತಂಡಗಳಾಗಲಿ ಎಂತಹ ಬಲಿಷ್ಠ ತಂಡಗಳೇ ಆಗಲಿ ಅಥವಾ ಫಿಕ್ಸಿಂಗ್ ಮಾಡಿಕೊಂಡು ಪಂದ್ಯಗಳನ್ನಾಡುವ ತಂಡಗಳೇ ಆಗಲಿ ಖಂಡಿತ ಪಂದ್ಯ ಇನ್ನೂ ಆರ್ಸಿಬಿ ತಂಡದ ಕೈಯಲ್ಲಿದೆ ಎಂದು ಆಲೋಚನೆಯಲ್ಲಿ ತೊಡಗಿಕೊಳ್ಳುತ್ತಿದ್ದವು.

ಇಂತಹ ಅದ್ಭುತ ಜೋಡಿ ಕಳೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗಿನ ಪಂದ್ಯದಲ್ಲಿ ಕೊಂಚ ಮಂಕಾದಂತೆ ಕಾಣಿಸಿತು. 7ನೇ ಓವರ್ ನಲ್ಲಿ ಎಬಿಡಿ ಮತ್ತು ವಿರಾಟ್ ಕೊಹ್ಲಿ ರವರು ಜೊತೆಯಾಗಿದ್ದರು, ಬರೋಬ್ಬರಿ ಹದಿನೆಂಟನೇ ಓವರ್ ಗಳವರೆಗೂ ಇವರಿಬ್ಬರು ಸ್ಕ್ರೀಜ್ ನಲ್ಲಿ ಇದ್ದರೂ ಕೂಡ ತಂಡ 150 ಗಡಿ ದಾಟುವಲ್ಲಿ ವಿಫಲವಾಯಿತು. ಇವರಿಬ್ಬರೂ ಸ್ಕ್ರೀಜ್ ನಲ್ಲಿ ಇದ್ದರೆ ಖಂಡಿತ ಆರ್ಸಿಬಿ ತಂಡ 150 ಅಲ್ಲ 180 ಅಥವಾ ಇನ್ನೂರರ ಗಡಿ ದಾಟಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ತಂಡ ನೂರ ಐವತ್ತರ ಗಡಿ ಕೂಡ ದಾಟಲಿಲ್ಲ.

ಭಾರತೀಯ ಹಿರಿಯ ಆಟಗಾರ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಲೆಜೆಂಡ್ ಗಳಲ್ಲಿ ಒಬ್ಬರಾಗಿರುವ ವೀರೇಂದ್ರ ಸೆಹ್ವಾಗ್ ರವರು ಇದರ ಕುರಿತು ಪ್ರತಿಕ್ರಿಯೆ ನೀಡಿದ್ದು ನಾನು ಕೂಡ ಇವರಿಬ್ಬರೂ 11 ಓವರ್ಗಳ ಕಾಲ ಜೊತೆಯಾಗಿ ಇದ್ದಾರೆ ಎಂದರೆ ಕನಿಷ್ಠ ಆರ್ಸಿಬಿ ತಂಡವು 186 ಗಡಿದಾಟುತ್ತದೆ ಎಂದುಕೊಂಡಿದ್ದೆ ಆದರೆ ಇವರಿಬ್ಬರು ರನ್ ಗಳಿಸುವಲ್ಲಿ ವಿಫಲರಾದರು, ಇವರ ಜೊತೆಯಾಟವನ್ನು ನೋಡಿದರೇ ಕೋ’ಮಾದಲ್ಲಿ ಇದ್ದಂತೆ ಕಾಣುತ್ತಿತ್ತು, ಯಾವ ಕಾರಣಕ್ಕಾಗಿ ಇಬ್ಬರು ರನ್ ಗಳಿಸಲು ಮುಂದಾಗಲಿಲ್ಲ ಎಂಬುದು ನನಗೆ ಅರ್ಥವಾಗಲಿಲ್ಲ ಕೋ’ಮಾದಲ್ಲಿ ಇದ್ದಂತೆ ಭಾಸವಾಗುತ್ತಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್