ಚೆನ್ನೈ ಜೊತೆಗಿನ ಪಂದ್ಯಕ್ಕೆ ಎರಡು ಮಹತ್ವದ ಬದಲಾವಣೆ ಮಾಡಲು ಮುಂದಾದ ಆರ್ಸಿಬಿ !

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಹೊಂದಿರುವ, ದೆಹಲಿ, ಮುಂಬೈ ಹಾಗೂ ಆರ್ಸಿಬಿ ತಂಡಗಳು ತಲಾ 14 ಪಾಯಿಂಟ್ಗಳನ್ನು ಹೊಂದಿದ್ದರೂ ಕೂಡ ರನ್ರೆಟ್ ಆಧಾರದ ಮೇರೆಗೆ ಮುಂಬೈ ತಂಡ ಮೊದಲನೇ ಸ್ಥಾನ ಪಡೆದುಕೊಂಡಿದ್ದರೇ,‌ ಡೆಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ‌. ಇನ್ನುಳಿದಂತೆ ಆರ್ಸಿಬಿ ತಂಡ ಮೂರನೇ ಸ್ಥಾನದಲ್ಲಿದ್ದು ಈಗಾಗಲೇ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಇನ್ನು ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯಗಳನ್ನು ಜಯಿಸಿದರೂ ಕೂಡ ಆರ್ಸಿಬಿ ತಂಡವು ಪ್ಲೇಆಫ್ ಹಂತವನ್ನು ತಲುಪಲಿದೆ.

ಇನ್ನು ಇದೇ ಭಾನುವಾರ ಆರ್ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಪಂದ್ಯವಾಡಲಿದ್ದು ಈ ಪಂದ್ಯದಲ್ಲಿ ಆರ್ಸಿಬಿ ತಂಡ ಜಯಗಳಿಸಿದರೇ ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ಈ ಸಂದರ್ಭದಲ್ಲಿಯೇ ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ತಂಡದಲ್ಲಿ ಕೆಲವೊಂದು ಬದಲಾವಣೆಗಳ ಮೂಲಕ ಪ್ರಯೋಗ ನಡೆಸಲು ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಸಿದ್ಧತೆ ನಡೆಸಿದೆ ಎಂಬ ಮಾತುಗಳು ಕೇಳಿಬಂದಿವೆ. ಟೂರ್ನಿಯ ಆರಂಭದಲ್ಲಿ ಉತ್ತಮವಾಗಿ ರನ್ ಗಳಿಸುತ್ತಿದ್ದ ಆರನ್ ಫಿಂಚ್ ಅವರನ್ನು ಒಂದೆರಡು ಪಂದ್ಯಗಳಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಪಾರ್ಥಿವ್ ಪಟೇಲ್ ರವರನ್ನು ಕರೆತರುವ ಮೂಲಕ ಪಾರ್ಥಿವ್ ಪಟೇಲ್ ರವರಿಗೆ ಅವಕಾಶ ನೀಡಲು ಆರ್ಸಿಬಿ ತಂಡ ಆಲೋಚನೆ ನಡೆಸಿದೆ.

ಅಷ್ಟೇ ಅಲ್ಲದೆ ಇನ್ನು ಫಿಂಚ್ ರವರಿಂದ ತೆರವಾದ ಸ್ಥಾನವನ್ನು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುತ್ತಿದ್ದ ಮೊಯಿನ್ ಅಲಿ ರವರಿಗೆ ನೀಡುವ ಮೂಲಕ ಮಧ್ಯಮ ಕ್ರಮಾಂಕ ವನ್ನು ಮತ್ತಷ್ಟು ಬ’ಲಗೊಳಿಸಿ, ಮತ್ತೊಂದು ಬೌಲಿಂಗ್ ಆಯ್ಕೆಯನ್ನು ಹೆಚ್ಚಿಸಿಕೊಳ್ಳಲು ಆರ್ಸಿಬಿ ತಂಡ ಚಿಂತನೆ ನಡೆಸಿದೆ. ಆದರೆ ಪಾರ್ಥಿವ್ ಪಟೇಲ್ ಸ್ಥಾನ ‌ಪಡೆದುಕೊಂಡರೇ ಇಬ್ಬರು ಆಟಗಾರರು ಎಡಗೈ ಬ್ಯಾಟ್ಸ್ಮನ್ ಆಗಿರುವ ಕಾರಣ ವಿರಾಟ್ ಕೊಹ್ಲಿ ರವರು ಆರಂಭಿಕರಾಗಿ ಕಣಕ್ಕಿಳಿಯುತ್ತಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ವಿರಾಟ್ ಕೊಹ್ಲಿ ರವರು ತಮ್ಮ ಮೂಲಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರೆ ಉತ್ತಮ ಎಂಬುದು ಅಭಿಮಾನಿಗಳ ಆಶಯ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್