ಈ ಪಂಚಮುಖಿಯ ಲಿಂಗವನ್ನು ದರ್ಶನ ಪಡೆಯಲು ನೀರಿನಲ್ಲಿ ಈಜಿಕೊಂಡು ಹೋಗಬೇಕು, ಎಲ್ಲಿದೆ ದೇವಸ್ಥಾನ ಗೊತ್ತ ??

ನಮಸ್ಕಾರ ಸ್ನೇಹಿತರೆ, ಕೋಟಿಲಿಂಗಗಳಲ್ಲಿ ಒಂದೇ ಒಂದು ಲಿಂಗ ಕಡಿಮೆಯಾದ ಕಾರಣ ಈ ಕ್ಷೇತ್ರ ಕಾಶಿ’ಯಾಗುವ ಅವಕಾಶವನ್ನು ಕಳೆದುಕೊಂಡಿತು ಎಂದು ಇಲ್ಲಿನ ಇತಿಹಾಸ ಹೇಳುತ್ತದೆ. ಸತತ ಬರಗಾಲ ಮತ್ತು ಭೀ’ಕರತೆಗೆ ಹಳ್ಳ ಕೆರೆ ಬಾವಿಗಳು ಕ್ರಮೇಣ ಬತ್ತಿದರೂ ಇಲ್ಲಿರುವ ಹೋಂಡಾ ಮಾತ್ರ ಬರದ ಭೀ’ಕರತೆಯ ನಡುವೆಯೂ ಬತ್ತದೆ, ತನ್ನ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಅದೇ ಈ ಜಾಗದ ರಹಸ್ಯ.

ಭಾರತದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರ ಕರ್ನಾಟಕ ರಾಜ್ಯದ, ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಕೇವಲ 14 ಕಿಲೋಮೀಟರ್ ಕ್ರಮಿಸಿದರೆ ಮಹಾಕೂಟ ಸಿಗುತ್ತದೆ. ಪ್ರಾಚೀನ ದೇವಾಲಯಗಳ ಕೂಟವೇ ಮಹಾಕೂಟ, ಇಲ್ಲಿ ನಿರ್ಮಿತವಾಗಿರುವ ಸುಂದರ ಮತ್ತು ಹಸಿರಿನಿಂದ ಕೂಡಿರುವ ಬೆಟ್ಟಗಳ ಮಧ್ಯೆ ಗುಡಿಗಳ ಗುಂಪೆ ಈ ಮಹಾಕೂಟ. ಜಲ ಹಾಗೂ ಹಸಿರಿಂದ ಕೂಡಿದ ಈ ಪ್ರದೇಶ ಪ್ರವಾಸಿಗರನ್ನು ಹಾಗೂ ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಿದೆ. ನಾನಾ ದೇವರುಗಳು ಒಂದೇ ಆವರಣದಲ್ಲಿ ಮೇಳೈಸಿದ್ದು, ಆವರಣದ ಆಚೆಗೂ ಒಂದೆರಡು ದೇವಸ್ಥಾನಗಳಿವೆ.

ಹಸಿರು ಹಾಗೂ ಬೆಟ್ಟಗಳ ನಡುವೆ ಇರುವ ಮಹಾಕೂಟ ಈ ಭಾಗದ ಜನರಿಗೆ ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾಗಿದೆ. ನಾವು ಮೊದಲೇ ಹೇಳಿದಹಾಗೆ ಕೋಟಿಲಿಂಗವಾಗಲು ಒಂದೇ ಒಂದು ಲಿಂಗ ಕಡಿಮೆಯಾದ ಕಾರಣ ಈ ಕ್ಷೇತ್ರ ಕಾಶಿ’ಯಾಗುವ ಅವಕಾಶವನ್ನು ಕಳೆದುಕೊಂಡಿದ್ದು. ಇಲ್ಲಿನ ಕಲ್ಯಾಣಿ ವಿಷ್ಣು ಪುಷ್ಕರಣಿ ಎಂದು ಹೆಸರುವಾಸಿಯಾಗಿದೆ. ಶಿವ ವಿಷ್ಣು, ಸರಸ್ವತಿ, ವೀರಗರ್ಭ ಇನ್ನಿತರ ದೇವತೆಗಳ ಅಪೂರ್ವ ಶಿಲ್ಪಕಲೆ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

ಮಂಗೇಶನ ಶಾಸನವೊಂದು ಇಲ್ಲಿಯ ದೇವರನ್ನು ಮುಕುಟೇಶ್ವರನಾಥ ಎಂದು ಹೇಳಲಾಗುತ್ತದೆ. ಅದೇ ಮುಕುಟೇಶ್ವರ ಕ್ರಮೇಣ ಮುಕುಟೇಶ್ವರನಾಗಿ ಕರೆಯಲ್ಪಡುತ್ತದೆ. ಇದರಿಂದಾಗಿಯೇ ಈ ಕ್ಷೇತ್ರಕ್ಕೆ ಮಹಾಕೂಟ ಎಂದು ಹೆಸರು ಬಂತೆಂದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಬಯಲುಸೀಮೆಯಲ್ಲಿ ಬೇಸಿಗೆ ಬಂತು ಅಂದ್ರೆ ಸಾಕು ನದಿ, ಹಳ್ಳ ಕೊಳ್ಳಗಳು ಬ’ತ್ತಿ ಹೋಗೋದು ಸರ್ವೇಸಾಮಾನ್ಯ, ಆದ್ರೆ ಮಹಾಕೂಟದಲ್ಲಿ ಮಾತ್ರ ಕಾಶಿ ತೀರ್ಥ ಮತ್ತು ವಿಷ್ಣು ಪುಷ್ಕರಣಿ ಎಂಬ ಎರಡು ಹೊಂಡಗಳು ಎಂತಹ ಬರಗಾಲದಲ್ಲೂ ಸಹ ಬತ್ತಿ ಹೋಗೋದಿಲ್ಲ.

ಹಾಗೆ ಹೊಂಡದಲ್ಲಿ ಶಿವನ ಲಿಂಗವಿದ್ದು ಹೊಂಡದಲ್ಲಿ ಮುಳುಗಿ ದರ್ಶನ ಮಾಡುವುದು ಮತ್ತೊಂದು ವಿಶೇಷ. ಈಜು ಬಲ್ಲವರು ಮಾತ್ರ ನೀರಿನಲ್ಲಿ ಮುಳುಗಿ ಶಿವನ ದರ್ಶನವನ್ನು ಪಡೆಯುತ್ತಾರೆ. ಶಿವನ ಲಿಂಗವನ್ನು ಅಗಸ್ತ್ಯಮುನಿಗಳು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಸರ್ವೇ ಜನ ಸುಖಿನೋ ಭವಂತು ಎಲ್ಲರಿಗೂ ಶುಭವಾಗಲಿ ಶುಭದಿನ..

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್