ಮುಂದಿನ ಸಿಎಂ ಬಗ್ಗೆ ಹೊಸ ಲೆಕ್ಕಾಚಾರ ನಡೆಯುತ್ತಿದೆ, ಕಾಂಗ್ರೆಸ್ ನಲ್ಲಿ ಅಚ್ಚರಿಯ ಪ್ರಸ್ತಾವನೆ !

ಉಪ ಚುನಾವಣೆ ಪ್ರಚಾರ ಬಿಸಿ ಏರುತ್ತಿದ್ದಂತೆಯೇ, ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂದು ಪ್ರಸ್ತಾಪನೆ ನಡೆಯುತ್ತಿದೆ,, ಜೆಡಿಎಸ್ ಮತ್ತು ಬಿಜೆಪಿ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ..

ಇತ್ತೀಚೆಗಷ್ಟೇ ಬಿಜೆಪಿಯಲ್ಲಿ, ಸಿಎಂ ಬದಲಾವಣೆ ಎಂಬ ಮಾತು ಕೇಳಿಬರುತ್ತಿತ್ತು,, ಇದು ತಣ್ಣಗಾಗುತ್ತಿದ್ದ ಅಂತೆಯೇ ಕಾಂಗ್ರೆಸ್ನಲ್ಲಿ ಮಹತ್ವವಾದ ಮತ್ತೊಂದು ಹೊಸ ಮಾತು ಹೊರಬಿದ್ದಿದೆ,, ವಿಧಾನಸಭೆ ಚುನಾವಣೆ ಇನ್ನೂ ಎರಡುವರೆ ವರ್ಷ ಇರುವಾಗಲೇ, ಈ ಮಾತು ಎಲ್ಲೆಡೆ ಭುಗಿಲೆದ್ದಿದೆ,, ದಿಢೀರ್ ಎಂದು ಹೊರಬಿದ್ದ ಈ ಮಾತಿಂದ ಉಪಚುನಾವಣೆಯಲ್ಲಿ ಫಲಿತಾಂಶದಲ್ಲಿ ವ್ಯತ್ಯಾಸವಾಗಬಹುದೆ ಹಾಗೂ ಇದರ ಮೇಲೆ ಪರಿಣಾಮ ಉಂಟುಮಾಡಬಹು ದೆ, ಎಂಬ ವಿಶ್ಲೇಷಣೆಗಳು ಎಲ್ಲೆಡೆ ಕೇಳಿಬರುತ್ತಿವೆ..

ಕಾಂಗ್ರೆಸ್ನಲ್ಲಿ ಆತಂಕ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ನಲ್ಲಿ ಸಹಜವಾಗಿ ಅವರು ಸಿಎಂ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದಾರೆ. ಆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬ ಪ್ರಸ್ತಾವ ಮತದ ಬ್ಯಾಂಕಿಗೆ ಒಂದಷ್ಟು ಹಾನಿ ಉಂಟು ಮಾಡಬಹುದು ಎಂದು ಆತಂಕ ಕಾಂಗ್ರೆಸ್ನಲ್ಲಿ ಇದೆ. ಇದರಿಂದ ಜೆಡಿಎಸ್ ಮತ್ತು ಬಿಜೆಪಿಗೆ ಲಾಭ ವಾಗಬಾರದು ಎನ್ನಲಾಗುತ್ತಿದೆ. ಶಿರಾದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದ್ದರೂ, ಸಿಎಂ ಬಿ.ಎಸ್. ವೈ ಪುತ್ರ ವಿಜಯೇಂದ್ರ ಸಹಿತ ಬಿಜೆಪಿ ನಾಯಕರು ಅಲ್ಲೇ ಜಾಂಡಾ ಹೂಡಿದ ನಂತರ ಚಿತ್ರಣ ಬದಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆಂತರಿಕವಾಗಿ ಹೇಳಿಕೊಂಡಿದ್ದಾರೆ.

ಶಿರಾದಲ್ಲಿ 3 ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ ಅಲ್ಲಿ ಪಂಗಡ ಗೊಲ್ಲ, ಕುರುಬ, ಮುಸ್ಲಿಂ ಮತಗಳು ನಿರ್ಣಾಯಕ. ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗ ಮತಗಳು 2ಲಕ್ಷಕ್ಕೂ ಹೆಚ್ಚು ಇರುವುದರಿಂದ ನಿರ್ಣಾಯಕ. ಮತಗಳ ಕ್ರೂಢೀಕರಣ ಕ್ಕೆ ಕೆಪಿ‌‌ಸಿಸಿ ಅಧ್ಯಕ್ಷ ಡಿ.ಕೆ.ಶಿ ಹೆಚ್ಚು ಒತ್ತು ನೀಡಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ನ ಸಂಪ್ರದಾಯಿಕ ಮತಗಳನ್ನು ನೆಚ್ಚಿಕೊಳ್ಳಲಾಗಿದೆ.

ಪರಿಷತ್ ಚುನಾವಣೆ: ಪ್ರಚಾರ ಮುಕ್ತಾಯ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಪ್ರಚಾರ ಕೊನೆಗೊಂಡಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 28 ರಿಂದ ಮತದಾನ ನಡೆಯಲಿದ್ದು, ಸೋಮವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್