ಮಾಸ್ಕ್ ಗೊಂದಲ ದೂರ ಮಾಡಿದ ಬಿಬಿಎಂಪಿ, ಎಲ್ಲೆಲ್ಲಿ, ಯಾವಾಗ ಮಾಸ್ಕ್ ಧರಿಸಬೇಕು ಗೊತ್ತಾ ?? ಇಲ್ಲಿದೆ ನೋಡಿ ಮಾಹಿತಿ ಸುಮ್ಮನೆ ಫೈನ್ ಕಟ್ಟಬೇಡಿ !

ಮಾಸ್ಕ್ ಅನ್ನು ಯಾವಾಗ, ಎಲ್ಲಿ ಧರಿಸಬೇಕೆಂಬ ಗೊಂದಲಗಳನ್ನು ಇದೀಗ ಬಿಬಿಎಂಪಿ ದೂರಾಗಿಸಿದ್ದು,, ಕೋ’ವಿಡ್ ನಿವಾರಣೆಯ ಕ್ರಮವಾಗಿ ಮಾಸ್ಕ್ ಧರಿಸುವ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಂಗಳವಾರ ಈ ಮಾರ್ಗಸೂಚಿ ಹೊರಡಿಸಿರುವ ಬಿಬಿಎಂಪಿ, ನಾಲ್ಕು ಚಕ್ರಗಳ ವಾಹನ ಚಾಲಕರು ಏಕಾಂಗಿಯಾಗಿ ವಾಹನ ಚಲಾಯಿಸುತ್ತಿದ್ದರೂ, ಕಿಟಕಿಗಳನ್ನು ಮುಚ್ಚಿದ್ದರೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಾರು ನಿಲುಗಡೆ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೈಕ್ ಸವಾರರು ಎಲ್ಲಾ ಸಂದರ್ಭದಲ್ಲಿಯೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ ಧರಿಸಬೇಕಾಗಿ ಇಲ್ಲ. ಏಕೆಂದರೆ ಚಿಕ್ಕ ಮಕ್ಕಳಿಗೆ ಮಾಸ್ಕ್ ಗಳನ್ನು ಧರಿಸುವುದು ಕಷ್ಟಕರವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಶಾಲಾ-ಕಾಲೇಜು, ಪಾರ್ಕ್, ಸಾರ್ವಜನಿಕ ಶೌಚಾಲಯ, ಚಿತ್ರಮಂದಿರ, ಮಾರುಕಟ್ಟೆ, ಅಂಗಡಿ ಮಳಿಗೆ, ಕಚೇರಿ, ಮದುವೆ, ಸಭೆ-ಸಮಾರಂಭ ಸೇರಿದಂತೆ ಇನ್ನಿತರ ಕಡೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಮನೆಯಲ್ಲಿ ಪ್ರಾರ್ಥಮಿಕ ಸಂಪರ್ಕಿತ ರು ರೋಗಲಕ್ಷಣಗಳು ಇರುವವರು ಇದ್ದರೆ ಮಾಸ್ಕ್ ಧರಿಸುವುದು ಕಡ್ಡಾಯ, ಆದರೆ ಆರೋಗ್ಯವಂತ ಕುಟುಂಬದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ರೆಸ್ಟೋರೆಂಟ್ ಹಾಗೂ ಹೋಟೆಲ್ಗಳಲ್ಲಿ ಊಟ ಮಾಡುವ ಸಂದರ್ಭದಲ್ಲಿ ವಿನಾಯಿತಿ ನೀಡಲಾಗಿದೆ. ಆದರೆ ಕಟಿಂಗ್ ಶಾಪ್, ರೆಸ್ಟೋರೆಂಟ್, ಬಾರ್ ಸೇರಿದಂತೆ ಇನ್ನಿತರೆ ಕಡೆ ಸೇವೆ ಒದಗಿಸುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ.

ಸಮಿತಿಗಳನ್ನು ಒಳಗೊಂಡಿರುವ ಬಿಬಿಎಂಪಿ ಮುಖ್ಯ ಕಚೇರಿ ನಿಯಮಗಳನ್ನು ಪರಿಶೀಲನೆ ನಡೆಸುತ್ತದೆ. ನವೀನ್ ರಾಜ್ ಸಿಂಗ್, ಪ್ರಾದೇಶಿಕ ಆಯುಕ್ತ, ಬೆಂಗಳೂರು ಸರ್ಫರಾಜ್ ಖಾನ್ ವಿಶೇಷ ಆಯುಕ್ತರು, ಎಸ್ ಡಬ್ಲ್ಯೂ ಎಂ, ಬಿಬಿಎಂಪಿ. ಮುಖ್ಯ ಇಂಜಿನಿಯರ್, ಎಸ್ ಡಬ್ಲ್ಯೂ ಎಂ ಬಿಬಿಎಂಪಿ. ಪೊಲೀಸ್ ಆಯುಕ್ತರು ನಾಮನಿರ್ದೇಶನ ಮಾಡಿದ ಹಿರಿಯ ಪೊಲೀಸ್ ಅಧಿಕಾರಿ.

ಸಾರ್ವಜನಿಕರಿಗೆ ದಂಡ ವಿಧಿಸಲು ಯಾರಿಗೆ ಅಧಿಕಾರವಿದೆ ಎಂದು ತಿಳಿಯುವುದಾದರೆ, ಮಾರ್ಸೇಲ್ಸ್ ಮತ್ತು ಪೊಲೀಸ್ ಅಧಿಕಾರಿಗಳು,, ವಾರ್ಡ್ ಮಟ್ಟದ ಸಮಿತಿಯಲ್ಲಿರುವ ಸಹಾಯಕ ಇಂಜಿನಿಯರ್, ಹಿರಿಯ ಆರೋಗ್ಯ ನಿರೀಕ್ಷಕ ಕಾರ್ಯನಿರ್ವಾಹಕ, ವೈದ್ಯಕೀಯ ಆರೋಗ್ಯ, ಅಧಿಕಾರಿಗಳನ್ನು ಒಳಗೊಂಡ ವಿಭಾಗ ಮಟ್ಟದ ಸಮಿತಿಗಳು ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ವಾರ್ಡ್ ಮಟ್ಟದ ಸಮಿತಿಗಳನ್ನು ಕಾರ್ಯನಿರ್ವಹಣೆಯನ್ನು ಪರಿಶೀಲನೆ ನಡೆಸಬಹುದು.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್