ಅಮಾವಾಸ್ಯೆ ದಿನ ಎಂದು ವ್ಯಂಗ್ಯದ ಸಮೇತ ಕುಮಾರಸ್ವಾಮಿಗೆ ಮತ್ತೊಂದು ಶಾಕ್ ನೀಡಿದ ಡಿಕೆಶಿ

ಸ್ನೇಹಿತರೇ, ಚುನಾವಣೆ ಎಂದಮೇಲೆ ಪಕ್ಷಾಂತರ ಎಂಬುದು ಸಾಮಾನ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಮಾತು. ಆದರೆ ಮೊದಲು ನಡೆಯುತ್ತಿದ್ದ ಪಕ್ಷಾಂತರಗಳು ಬಹಳ ಅಳೆದು ತೂಗಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಾಗಿದ್ದವು. ಆದರೆ ಇದೀಗ ಮುಂಜಾನೆ ಒಂದು ಪಕ್ಷ ಸೇರಿ ಸಂಜೆ ಮತ್ತೊಂದು ಪಕ್ಷ ಸೇರುವ ಮಟ್ಟಕ್ಕೆ ಪಕ್ಷಾಂತರ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಉಪ ಚುನಾವಣೆಯ ಸಂದರ್ಭದಲ್ಲಿಯೂ ಕೂಡ ಪಕ್ಷಾಂತರ ಹೆಚ್ಚಾಗಿದ್ದು, ಒಂದೆಡೆ ಬಿಜೆಪಿ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದರೇ, ಮತ್ತೊಂದೆಡೆ ಡಿಕೆಶಿ ತಮ್ಮ ರಾಜಕೀಯ ತಂತ್ರಗಳಿಂದ ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಸ್ನೇಹಿತರೇ, ಇಡೀ ರಾಜ್ಯಾದ್ಯಂತ ಬಾರಿ ಕುತೂಹಲ ಮೂಡಿಸಿರುವ RR ನಗರ ಉಪ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆಯುವ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ RR ನಗರ ಜೆಡಿಎಸ್ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ ರವರು ಜೆಡಿಎಸ್ ಪಕ್ಷದ ವಿರುದ್ಧ ತೊಡೆತಟ್ಟಿ, ಜೆಡಿಎಸ್ ಪಕ್ಷದ ಬಿಡುವುದಷ್ಟೇ ಅಲ್ಲದೇ, ಕುಮಾರ ಸ್ವಾಮಿ ರವರು ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ. ಇವರ ಜೊತೆಗೆ ಇನ್ನು ವಿವಿಧ ಮುಖಂಡರು, ಕಾರ್ಯಕರ್ತರು ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದೇ ಸಮಯದಲ್ಲಿ ಮಾತನಾಡಿದ ಡಿಕೆಶಿ ರವರು, ಕುಮಾರಸ್ವಾಮಿ ರವರ ಹೆಸರು ಹೇಳದೇ ನೀವೆಲ್ಲ ನಮ್ಮ ಪಕ್ಷಕ್ಕೆ ಸೇರಿದ್ದೀರಿ, ಬೇರೆ ಪಕ್ಷದ ಮುಖಂಡರು ವಿಚಾರ ನಮಗೆ ಬೇಕಿಲ್ಲ, ಇವತ್ತು ಅಮಾವಾಸ್ಯೆ ಬೇರೆ ಮೊದಲೇ ನಮ್ಮ ವಿರುದ್ಧ ಕಿ’ಡಿಕಾರುತ್ತಿದ್ದರೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಇದೇ ಸಮಯದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು ಜೆಡಿಎಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸುವ ಕೆಲಸ ನಡೆಯುತ್ತಿಲ್ಲ. ಹಲವು ವರ್ಷಗಳಿಂದ ನಾವೆಲ್ಲಾ ಜೆಡಿಎಸ್ ನಲ್ಲಿದ್ದೇವೆ. ಕುಮಾರಣ್ಣ ನಮ್ಮ ನಾಯಕರು ಅಂದುಕೊಂಡಿದ್ದೆವು. ಆದರೆ, ಅವರು ಇನ್ನೊಬ್ಬರನ್ನು ಮೇಲೆ ಬರಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಸೇರಿಕೊಂಡಿದ್ದೇವೆ ಎಂದಿದ್ದಾರೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್