ಹಲವು ದಾಖಲೆಗಳಿಗೆ ಸಾಕ್ಷಿಯಾದ ದಿಲ್ಲಿ ಹೈದರಾಬಾದ್ ಪಂದ್ಯ: ರಬಾಡ ಅನನ್ಯ ಸಾಧನೆ ಏನು ಗೊತ್ತಾ…!

ದುಬೈ: ಮಂಗಳವಾರ ಅಕ್ಟೋಬರ್ 27 ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವೂ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಡೆಲ್ಲಿಯನ್ನು 88 ರನ್ನುಗಳ ಭಾರಿ ಅಂತರದಿಂದ ಮಣಿಸಿ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ವಾರ್ನರ್ ಬಳಗ ಪ್ಲೇಆಫ್ ಹಾದಿ ಸುಗಮಗೊಳಿಸಿಕೊಂಡಿದೆ. ಮತ್ತೊಂದೆಡೆ ನಾಯಕ ಡೇವಿಡ್ ವಾರ್ನರ್ ಮಂಗಳವಾರದ ಗೆಲುವಿನ ಮೂಲಕ ಭರ್ಜರಿ ಬರ್ತಡೇ ಗಿಫ್ಟ್ ಪಡೆದಿದ್ದಾರೆ.

ರಶೀದ್ ಖಾನ್ ಡೇವಿಡ್ ವಾರ್ನರ್ ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ದುಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಕ್ಷರಶಃ ಮುಗಿಬಿದ್ದಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಎರಡು ವಿಕೆಟ್ ನಷ್ಟಕ್ಕೆ 219 ರನ್ ಗಳ ದಾಖಲೆಯ ಮೊತ್ತವನ್ನು ಪಡೆದಿತ್ತು. ಇದರಲ್ಲಿ ವಾರ್ನರ್- 66, ಸಹಾ- 87, ಪಾಂಡೆ- 44 ರನ್ ಗಳ ಕಾಣಿಕೆ ನೀಡಿದರು.

ಗುರಿ ಬೆನ್ನತ್ತಿದ ಶ್ರೇಯಸ್ ಬಳಗ, ರಶೀದ್ ಖಾನ್ ದಾಳಿಗೆ ತತ್ತರಿಸಿ ಹೋಗಿತ್ತು. ಡೆಲ್ಲಿ ಪರ ರಿಷಬ್ ಪಂತ್, ಅಜಿಂಕ್ಯಾ ರಹಾನೆ ಹೊರತುಪಡಿಸಿದರೆ ಯಾರೊಬ್ಬರೂ ಆರ್ಭಟಿಸಲಿಲ್ಲ.ಮಿಂಚಿನ ಬೌಲಿಂಗ್ ನಡೆಸಿದ ರಶೀದ್ ಖಾನ್ 4 ಓವರ್ಗಳಲ್ಲಿ ಕೇವಲ 7 ರನ್ ನೀಡಿ 3 ವಿಕೆಟ್ ಪಡೆದರು. ಅಂತಿಮವಾಗಿ ಡೆಲ್ಲಿ 19 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡು 131 ರನ್ ಗೆ ಔಟ್ಆಯಿತು.

ಆ ಮೂಲಕ ಸತತ ಮೂರು ಸೋಲು ಕಂಡ ಡೆಲ್ಲಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು. ಸನ್ರೈಸರ್ಸ್ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಘಾತಕ ಬೌಲಿಂಗ್ ನಡೆಸಿದ ರಶೀದ್ ಖಾನ್ ಸನ್ ರೈಸಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ನಾಲ್ಕು ವರ್ಷಗಳಲ್ಲಿ ಕೇವಲ 7 ರನ್ ನೀಡಿದ ರಶೀದ್ ಖಾನ್, ಡೆಲ್ಲಿಯ ಪ್ರಮುಖ ಮೂರು ವಿಕೆಟ್ ಉರುಳಿಸಿದರು ಐಪಿಎಲ್ ಇತಿಹಾಸದಲ್ಲಿ ಇದು ಆರನೇ ಎಕನಾಮಿಕಲ್ 4 ಓವರ್ ಬೌಲಿಂಗ್ ಎನಿಸಿಕೊಂಡಿದೆ. ಮತ್ತು ಬೆಂಗಳೂರಿನ ವಿರುದ್ಧ 206 ರನ್ ಪೇರಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. 219ರನ್ ಗಳು 2020ರ ಐಪಿಎಲ್ ಕ್ರೀಡಾಕೂಟದಲ್ಲಿ ಸನ್ರೈಸರ್ಸ್ ದಾಖಲಿಸಿದ ಅತಿ ದೊಡ್ಡ ಮೊತ್ತ ಕೂಡ ಹೌದು.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್