Surya the heat: ಬೇಜಾನ್ ಬಿಲ್ಡಪ್ ಕೊಟ್ಟು ಕೊಹ್ಲಿ ಜೊತೆ ಗುರಾಯಿಸಿ ಕಿರಿಕ್ ಮಾಡಿಕೊಂಡ ಸೂರ್ಯನಿಗೆ ಇಲ್ಲಿದೆ ಉತ್ತರ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಕಂಡಿದೆ. ಮುಂಬೈ ಇಂಡಿಯನ್ಸ್ ತಂಡದ ಪರ ಸೂರ್ಯಕುಮಾರ ಯಾದವ್ ರವರು ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಆದರೆ ಪಂದ್ಯದ ಸಮಯದಲ್ಲಿ ತನ್ನನ್ನು ಟೀಂ ಇಂಡಿಯಾ ಕ್ರಿಕೆಟಿಗೆ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೋ ಏನೋ ತಿಳಿದಿಲ್ಲ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ರವರ ನಡುವೆ ‌ ವಿವಾದ ಸೃಷ್ಟಿಸುವಂತಹ ಘಟನೆ ನಡೆದಿದೆ, ಹೌದು ಇಬ್ಬರು ದಿ’ಟ್ಟ ಕಣ್ಣುಗಳಿಂದ ನೋಡುವ ಮೂಲಕ ಗುರಾಯಿಸಿದರು, ಇಬ್ಬರು ಕೆಲವೊಂದು ಸೆಕೆಂಡುಗಳ ಕಾಲ ಒಬ್ಬರನ್ನೊಬ್ಬರು ಗುರಾಯಿಸುತ್ತಿದ್ದರು.

ಇದನ್ನು ಕಂಡ ನೆಟ್ಟಿಗರು ಕೆಲವರು ಕೊಹ್ಲಿ ರವರನ್ನು ಬೆಂಬಲಿಸಿದರೇ ಇನ್ನು ಕೆಲವರು ಸೂರ್ಯ ಕುಮಾರ್ ಯಾದವ್ ರವರು ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದರು ಆಯ್ಕೆಯಾಗುತ್ತಿಲ್ಲ, ಇವರು ತಂಡದಲ್ಲಿ ಸ್ಥಾನ ಪಡೆಯಬೇಕಾಗಿತ್ತು ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಸ್ನೇಹಿತರೇ ಸೂರ್ಯಕುಮಾರ ಯಾದವ್ ರವರು ತಂಡದಲ್ಲಿ ನಿಜವಾಗಲೂ ಸ್ಥಾನ ಪಡೆಯಲು ಅರ್ಹತೆ ಹೊಂದಿದ್ದಾರೆಯೇ? ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುತ್ತಿದೆ ನಾವು ಇಂದು ಆ ಪ್ರಶ್ನೆಗೆ ಲೆಕ್ಕಾಚಾರಗಳ ಕುರಿತು ಮಾಹಿತಿ ನೀಡುತ್ತೇವೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡವು ವಿಶ್ವದಲ್ಲಿರುವ ಬ’ಲಾಢ್ಯ ತಂಡಗಳಲ್ಲಿ ಒಂದಾಗಿದೆ. ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದರೇ ಕಂಡಿತ ಆತನೊಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರ ಆಗಿರಬೇಕು, ಉತ್ತಮವಾಗಿದ್ದರೂ ಕೂಡ ಸಾಲದು, ಯಾಕೆಂದರೆ ಭಾರತದಲ್ಲಿ ಬಹಳ ಜನಪ್ರಿಯತೆ ಹೊಂದಿರುವ ಕಾರಣ ಸಾವಿರಾರು ಉತ್ತಮ ಆಟಗಾರರು ಇದ್ದಾರೆ. ಆದರೆ ಕೇವಲ ಅತ್ಯುತ್ತಮರು ಮಾತ್ರ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 135 ಕೋಟಿ ಜನರಲ್ಲಿ 15ರ ಬಳಗದಲ್ಲಿ ಸ್ಥಾನ ಪಡೆಯಬೇಕು ಎಂದರೆ ಆತ ಎಷ್ಟು ಅತ್ಯುತ್ತಮ ಆಟಗಾರ ಆಗಿರಬೇಕು ಎಂಬುದು ನಿಮ್ಮ ಅಂದಾಜಿಗೆ ಬಿಡುತ್ತೇವೆ.

ಈ ಎಲ್ಲ ಲೆಕ್ಕಾಚಾರಗಳ ನಡುವೆ ಸೂರ್ಯಕುಮಾರ್ ರವರು ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಕೆಲವರು ವಾದ ಮಂಡಿಸುತ್ತಿದ್ದಾರೆ, ಆದರೆ ಸ್ನೇಹಿತರೇ ಸೂರ್ಯಕುಮಾರ್ ರವರ ಅಂಕಿಅಂಶಗಳನ್ನು ನಾವು ಗಮನಿಸುವುದಾದರೆ ಸೂರ್ಯಕುಮಾರ್ ರವರು ಇಲ್ಲಿಯವರೆಗೂ ಆಡಿರುವ 8 ಐಪಿಎಲ್ ಟೂರ್ನಿ ಗಳಿಂದ ಕೇವಲ 10 ಅರ್ಧಶತಕವನ್ನು ಗಳಿಸಿದ್ದಾರೆ, ಈ ಬಾರಿ ಬಹಳ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ಎನ್ನುತ್ತಿರುವ ಸೂರ್ಯಕುಮಾರ್ ರವರು 12 ಪಂದ್ಯಗಳಿಂದ 362 ರನ್ ಗಳಿಸಿದ್ದಾರೆ, ಇವರಿಗಿಂತಲೂ ಶುಭಂ ಗಿಲ್, ಶ್ರೇಯಸ್ ಐಯರ್, ಮಾಯಾಂಕ್ ಅಗರ್ವಾಲ್, ಶಿಖರ್ ಧವನ್, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರವರು ಹೆಚ್ಚಿನ ರನ್ ಗಳಿಸಿದ್ದಾರೆ ಎಂಬುದನ್ನು ಮರೆತ್ತಿದ್ದಾರೆ. ಆದರೂ ಕೂಡ ಎಲ್ಲರ ಚಿತ್ತ ಸೂರ್ಯಕುಮಾರ್ ಯಾದವ್ ರವರತ್ತ ನೆಟ್ಟಿದೆ. ಇದಕ್ಕೆಲ್ಲ ಕಾರಣ ಕೇವಲ ಕೆಲವೊಂದಷ್ಟು ಜನರ ಭಾವನಾತ್ಮಕ ಸಂಗತಿಗಳು.

ಹೌದು ಸ್ನೇಹಿತರೇ ಇತ್ತೀಚಿನ ಸಂದರ್ಶನದಲ್ಲಿ ಸೂರ್ಯ ಕುಮಾರ್ ಯಾದವ್ ಅವರು ನಮ್ಮ ತಂದೆ ಪ್ರತಿಬಾರಿಯೂ ಅಂತರರಾಷ್ಟ್ರೀಯ ಕ್ರಿಕೆಟ್ ತಂಡ ಘೋಷಣೆಯಾದಾಗ ವೆಬ್ಸೈಟ್ ಓಪನ್ ಮಾಡಿ ತದನಂತರ ನನಗೆ ಫೋನ್ ಮಾಡುತ್ತಾರೆ, ನೀನು ಸೆಲೆಕ್ಟ್ ಆಗಿಲ್ಲ ಎಂದು, ಆದರೂ ಕೂಡ ನಿನ್ನ ಆಟವನ್ನು ಮುಂದುವರಿಸು ಎಂದು ಧೈ’ರ್ಯ ತುಂಬುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ಇದನ್ನು ಕಂಡ ಜನರು ಇವರು ನಿಜವಾಗಲೂ ಭಾರತೀಯ ಕ್ರಿಕೆಟ್ ತಂಡಕ್ಕೆ ಸ್ಥಾನ ಪಡೆಯಲು ಅರ್ಹತೆ ಹೊಂದಿದ್ದಾರೆ. ಆದರೆ ಕಾರಣಾಂತರಗಳಿಂದ ಇವರನ್ನು ಆಯ್ಕೆ ಮಾಡುತ್ತಿಲ್ಲ ಎಂದು ವೈರಲ್ ಮಾಡಿದರು. ಆದರೆ ಸ್ನೇಹಿತರೇ ಸೂರ್ಯಕುಮಾರ್ ಅವರಿಗಿಂತ ಹತ್ತು ಜನ ಹೆಚ್ಚಿನ ರನ್ ಗಳಿಸಿದ್ದು ಅದರಲ್ಲಿ ಭಾರತೀಯರು ಕೂಡ ಇದ್ದಾರೆ. ನಮ್ಮ ದೇವದತ್ ಪಡಿಕಲ್ ರವರು ಕೂಡ ಇದೇ ಮೊಟ್ಟಮೊದಲ ಬಾರಿಗೆ ಐಪಿಎಲ್ ಆಡುತ್ತಿದ್ದರೂ 12 ಪಂದ್ಯಗಳಿಂದ ಇವರಿಗಿಂತ 60 ರನ್ನುಗಳನ್ನು ಹೆಚ್ಚು ಗಳಿಸಿದ್ದಾರೆ ಹಾಗೂ ಆಟವಾಡಿರುವ ಕೇವಲ 12 ಪಂದ್ಯಗಳಲ್ಲಿ ನಾಲ್ಕು ಅರ್ಧ ಶತಕಗಳಿಸಿದ್ದಾರೆ. ಇಷ್ಟಾದರೂ ಕೂಡ ಸೂರ್ಯ ರವರು ಆಯ್ಕೆಯಾಗಬೇಕಿತ್ತು ಎಂದು ಜನರು ಅಭಿಪ್ರಾಯ ಮಂಡಿಸಿದ ಕಾರಣ ಸೂರ್ಯಕುಮಾರ್ ರವರು ನೇರವಾಗಿ ವಿರಾಟ್ ಕೊಹ್ಲಿ ರವರ ಜೊತೆ ವಿವಾದದಲ್ಲಿ ಸಿಲುಕಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.

ಈತ ಐಪಿಎಲ್ ಟೂರ್ನಿ ಗೆ ಹೋಗುವ ಸಾಧನೆ ಮಾಡಿರಬಹುದು ಆದರೆ ಇದಕ್ಕಿಂತ ಹೆಚ್ಚಿನ ಸಾಧನೆ ಮಾಡುವವರು ಇಂದಿಗೂ ಕೂಡ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ತಮ್ಮದೇ ಆದ ಪರಿಶ್ರಮ ಹಾಕುತ್ತಿದ್ದಾರೆ. ನಮ್ಮ ಮನೀಶ್ ಪಾಂಡೆ, ರಾಜಸ್ತಾನ ರಾಯಲ್ಸ್ ತಂಡದ ಸಂಜು ಸಮ್ಸನ್ ರವರು ಇವರಿಗಿಂತಲೂ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾಗಿ ಬೆಂಚ್ ಕಾದು ವಾಪಸ್ ಬಂದಿದ್ದಾರೆ, ಅವರ್ಯಾರು ಕೂಡ ಈ ರೀತಿಯ ದು’ರ್ವರ್ತ’ನೆಯನ್ನು ತೋರಿಲ್ಲ. ಅಷ್ಟೇ ಯಾಕೆ ನಮ್ಮ ಕೆಎಲ್ ರಾಹುಲ್ ರವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡಲ ಅವರಿಗೆ ಕಾಯಂ ಆರಂಭಿಕ ಆಟಗಾರರ ಸ್ಥಾನ ಸಿಗುತ್ತಿಲ್ಲ. ಯಾಕೆಂದರೆ ಅಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭದ್ರವಾಗಿ ನೆಲೆಯೂರಿದ್ದಾರೆ. ಆದರೂ ಕೂಡ ಕೆ ಎಲ್ ರಾಹುಲ್ ಅವರು ತಾಳ್ಮೆಯಿಂದ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರೂ ಕೂಡ ಉತ್ತಮ ಪ್ರದರ್ಶನ ನೀಡಿ ತಾನೊಬ್ಬ ಅತ್ಯುತ್ತಮ ಆಟಗಾರ ಎಂದು ನಿರೂಪಿಸುತ್ತಿದ್ದಾರೆ. ಇವರೆಲ್ಲರಿಗೂ ಕೂಡ ತಂಡದ ಆಯ್ಕೆಯಾಗದೆ ಇದ್ದಾಗ ಆಯ್ಕೆದಾರರ ಅಥವಾ ವಿರಾಟ್ ಕೊಹ್ಲಿ ರವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುವುದು ದೊಡ್ಡ ಕೆಲಸವೇನಲ್ಲ, ಆದರೂ ಕೂಡ ಇಂತಹ ಆಟಗಾರರು ತಾಳ್ಮೆಯಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಾಯಂ ಸ್ಥಾನ ಪಡೆದುಕೊಳ್ಳಲು ಪರಿಶ್ರಮದ ಮೂಲಕ ಕಷ್ಟಪಡುತ್ತಿದ್ದಾರೆ. ಅವರು ಎಂದಿಗೂ ಆಯ್ಕೆ ಸಮಿತಿಯ ವಿರುದ್ಧವಾಗಿ ಮಾತನಾಡಿಲ್ಲ. ಎಂಟು ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿ 10 ಅರ್ಧ ಶತಕ ಗಳಿಸಿದ ತಕ್ಷಣ ನಿಮ್ಮನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸೇರಿಸಿಕೊಳ್ಳಬೇಕು ಎಂದರೇ ಏನರ್ಥ?? ಅಲ್ಲವೇ

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್