ಮೆದುಳಿನ ಟ್ಯೂಮರ್ ನ ಈ 4 ಅಚ್ಚರಿ ಕೆಯ ಲಕ್ಷಣಗಳನ್ನು ಎಂದಿಗೂ ಕಡೆಗಣಿಸಬಾರದು..!

ಸ್ನೇಹಿತರೆ ಮೆದುಳು ಒಂದು ಪ್ರಮುಖ ಅಂಗವಾಗಿದ್ದು ಮಾನವನ ಶರೀರದ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಮೆದುಳಿನ ಆರೋಗ್ಯ ಬಿಗಡಾಯಿಸಿದರೆ ಬದುಕು ನಡೆಸುವುದೇ ಕಷ್ಟ ಆಗುತ್ತೆ, ಮೆದುಳು ಶರೀರದ ಎಲ್ಲ ಭಾಗಗಳ ಜೊತೆ ಸಂಪರ್ಕ ಹೊಂದಿರುವುದರಿಂದ ಅದರಲ್ಲಿನ ಸಣ್ಣ ಸಮಸ್ಯೆ ಕೂಡ ಇಡೀ ವ್ಯವಸ್ಥೆಯಲ್ಲೇ ವ್ಯತ್ಯಾಸವನ್ನು ಉಂಟುಮಾಡಿ ವ್ಯಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ. ಮೆದುಳಿನ ಅನಾರೋಗ್ಯದ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ ಇದಕ್ಕೆ ಕಳಪೆ ಆಹಾರಕ್ರಮ ಹಾಗೂ ಅನಾರೋಗ್ಯಕರ ಜೀವನ ಶೈಲಿಯನ್ನು ಮಾತ್ರ ಅದುರುವ ಹಾಗೆ ಇಲ್ಲ.

ಸಣ್ಣಪುಟ್ಟ ಎಚ್ಚರಿಕೆಯ ಸೂಚನೆಗಳನ್ನು ನಿರ್ಲಕ್ಷಿಸುವ ನಮ್ಮ ಅಜ್ಞಾನವನ್ನು ದೂರ ಬೇಕಾಗುತ್ತದೆ. ಅದು ತಲೆನೋವು ಆಗಿರಲಿ ಹಾಗೂ ಬಳಲಿಕೆಯಾಗಿರಲಿ ಸಣ್ಣದಂತೆ ಕಾಣುವ ಸಮಸ್ಯೆ ಮೆದುಳು ಟ್ಯೂಮರ್ ಅಥವಾ ಮೆದುಳು ಗಡ್ಡೆ ಇಂತಹ ದೊಡ್ಡ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ. ಈ ಸೂಚನೆಗಳನ್ನು ಕಡೆಗಣಿಸಿದ ಹಲವಾರು ಜನ ಮೆದುಳು ಟ್ಯೂಮರ್ ಇದರಿಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮೆದುಳು ಟ್ಯೂಮರ್ ಅನ್ನೋದು ಮಾರಣಾಂತಿಕ ನಿಜ ಆದರೆ ಅದಕ್ಕೆ ಸಕಾರಾತ್ಮಕವಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೆ ಆಗುವ ಗಂಭೀರ ಹಾನಿಯನ್ನು ತಡೆಯಬಹುದು.

ಹಾಗಿದ್ದರೆ ಮೆದುಳು ಟ್ಯೂಮರ್ನ ಸಾಧ್ಯತೆಗಳನ್ನು ಸೂಚಿಸುವ ಎಚ್ಚರಿಕೆಯ ಸಂಕೇತವನ್ನು ನಾವು ನಿಮಗೆ ತಿಳಿಸುತ್ತೇವೆ, ಮುಖದ ಒಂದು ಭಾಗದಲ್ಲಿ ನಿಶಕ್ತಿ ಮುಖದಲ್ಲಿ ನೋವು ಕಾಣಿಸಿಕೊಳ್ಳುವುದು, ತಲೆನೋವಿನ ನಂತರದ ಮೆದುಳು ಟ್ಯೂಮರ್ ನ ಪ್ರಮುಖ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಶರೀರದ ಇತರ ಭಾಗಗಳಲ್ಲಿ ನೋವು ಉಂಟಾಗುವುದು, ಸಾಮಾನ್ಯವಾಗಿದ್ದರೂ ಮುಖದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಲ್ಲ. ಮುಖದಲ್ಲಿ ಅಥವಾ ಶರೀರದ ಯಾವುದೇ ಭಾಗದಲ್ಲಿ ನಿಶಕ್ತಿ ಅನುಭವವಾದರೆ ಅದನ್ನಿಂದು ಕಡೆಗಣಿಸದೆ ವೈದ್ಯರ ಸಲಹೆಯನ್ನು ತಗೊಳ್ಳೋದು ಉತ್ತಮ.

ಇನ್ನು ಎರಡನೇಯದಾಗಿ ಬಳಲಿಕೆ ನಿಮ್ಮ ನಿದ್ದೆಯ ಪ್ರಮಾಣ ಎಂದಿಗಿಂತ ಕಡಿಮೆಯಾಗಿದ್ದರೆ, ಅದು ಒಳ್ಳೆಯ ಸಂಕೇತವಲ್ಲ ಜೊತೆಗೆ ನೀವು ದಿನವಿಡಿ ಬಳಲಿಕೆಯನ್ನು ಅನುಭವಿಸುತ್ತಿದ್ದರೆ, ಅದು ನಿಮ್ಮ ಶರೀರದಲ್ಲಿನ ಅನಾರೋಗ್ಯವನ್ನು ಸೂಚಿಸುವುದರಿಂದ ಅದನ್ನು ಕಡೆಗಣಿಸಬೇಡಿ, ಮೆದುಳಿನ ಮೇಲೆ ಅತಿಯಾದ ಒತ್ತಡವು ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಗೆ ರಾತ್ರಿಯೆಲ್ಲಾ ನಿದ್ದೆ ಬರದೆ ಇರಬಹುದು ಹಾಗೆ ಹಗಲಿನಲ್ಲಿ ನಿದ್ದೆಯ ಮಂಪರು ಇರಬಹುದು ಇದು ಮೆದುಳು ಟ್ಯೂಮರ್ ನ ಸಂಕೇತವಾಗಿರಬಹುದು.

ಇನ್ನು ಮೂರನೆಯದಾಗಿ ದೈಹಿಕ ಚಟುವಟಿಕೆಗಳ ಮೇಲೆ ಪರಿಣಾಮ, ಮೆದುಳು ಟ್ಯೂಮರ್ ಉಂಟಾಗುವ ಮುನ್ನ ನೆನಪಿನ ಶಕ್ತಿ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇದು ಮಾತ್ರವಲ್ಲ ವ್ಯಕ್ತಿಗೆ ನಡೆದಾಡಲು ಸಹ ಕಷ್ಟವಾಗುತ್ತದೆ. ದೇಹದ ಒಂದು ಭಾಗದಲ್ಲಿ ನಿಶಕ್ತಿ ಕಾಣಿಸಿಕೊಳ್ಳುತ್ತದೆ ಹಾಗೆ ಮಾತನಾಡಲು ಕಷ್ಟ ಸಮಸ್ಯೆಗಳು ಎದುರಾಗುತ್ತವೆ. ಈ ಎಲ್ಲಾ ಸೂಚನೆಗಳು ಮೆದುಳು ಟ್ಯೂಮರ್ ನ ಲಕ್ಷಣವಾಗಿದೆವೆ ಆದ್ದರಿಂದ ಜಾಗರೂಕರಾಗಿರಿ ಮತ್ತು ಆರೋಗ್ಯದಿಂದಿರಿ.