ಪ್ರಪಂಚದ ಅತಿ ದೊಡ್ಡ ಪ್ರಯಾಣಿಕ ಹಡಗುಗಳು ಇವು, ನೀವು ಕನಸಲ್ಲೂ ಸಹ ಊಹಿಸಲು ಸಾಧ್ಯವಿಲ್ಲ ಇವುಗಳ ಉದ್ದ ಮತ್ತು ಅಗಲವನ್ನು..!

ಪ್ರಪಂಚದ ಇತಿಹಾಸದಲ್ಲಿ ಟೈಟಾನಿಕ್ ಎಂಬ ಪದ ಎಲ್ಲರ ಮನದಲ್ಲಿ ಉಳಿದು ಹೋಗಿದೆ 108 ವರ್ಷಗಳ ಹಿಂದೆ ಅಂದ್ರೆ 1912 ರಲ್ಲಿ 269 ಮೀಟರ್ ಉದ್ದ 53.3 ಮೀಟರ್ ಎತ್ತರ ಇರೋ ಟೈಟಾನಿಕ್ ಎಂಬ ದೊಡ್ಡ ಹಡಗು ಸಾವಿರ ಜನರನ್ನು ಹೊತ್ತು ಪ್ರಯಾಣಿಸುತ್ತಿರುವಾಗ, ಸಮುದ್ರದಲ್ಲಿ ಇದ್ದ ದೊಡ್ಡು ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಸಮುದ್ರದಲ್ಲಿ ಮುಳುಗಿ ಹೋಗುತ್ತದೆ, ಇದು ಇಡೀ ಪ್ರಪಂಚವೇ ಮರೆಯಲಾಗದ ಒಂದು ದೊಡ್ಡ ದು’ರ್ಘಟನೆ. ಇಂದು ನಾವು ಇಂತಹ ಅತಿದೊಡ್ಡ ಪ್ರಪಂಚದ ಐದು ಪ್ರಯಾಣಿಕ ಹಡಗುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

“ಸಿಂಪೋನಿ ಅಫ್ ದ ಸೀಸ್’ ಇದು ಪ್ರಪಂಚದಲ್ಲಿ ಅತಿ ದೊಡ್ಡ ಪ್ಯಾಸೆಂಜರ್ ಶಿಪ್, ಇದು ರಾಯಲ್ ಕೆರೆಬಿಯನ್ ಇಂಟರ್ನ್ಯಾಷನಲ್ ಕಂಪನಿಗೆ ಸೇರಿದ ಹಡಗು, ಇದು 2017 ರಲ್ಲಿ ಲಾಂಚ್ ಆಗಿ 2018ರಲ್ಲಿ ಇದರ ಕೆಲಸ ಪ್ರಾರಂಭ ಮಾಡುತ್ತದೇ, ಇದರ ಉದ್ದ 362 ಮೀಟರ್, ಎತ್ತರ 72 ಮೀಟರ್, ಇದರಲ್ಲಿ 6680 ಜನ ಪ್ರಯಾಣಿಸಬಹುದು, ಅದೇ ರೀತಿ ಇದರಲ್ಲಿ 2200 ಜನ ಕೆಲಸಗಾರರಿದ್ದಾರೆ ಇದು ಗಂಟೆಗೆ 41 ಕಿಲೋಮೀಟರ್ ಪ್ರಯಾಣ ಮಾಡುತ್ತದೇ, ಅದೇ ರೀತಿ, ಶಿಪ್ನ ತೂಕ 2,28,000 ಟನ್, ಇದರ ನಿರ್ಮಾಣಕ್ಕೆ ಸುಮಾರು 1.5 ಬಿಲಿಯನ್ ಹಣವನ್ನು ವೆಚ್ಚ ಮಾಡಲಾಗಿದೆ, ಹಾಗೆ ಇದರಲ್ಲಿ ಐಷಾರಾಮಿ ಹೋಟೆಲ್, ಶಾಪಿಂಗ್ ಮಾಲ್, ಜಿಮ್ ಈ ರೀತಿ ತುಂಬಾ ಸೌಲಭ್ಯಗಳು ಇವೆ.

“ಹಾರ್ಮೋನಿ ಆಫ್ ದಿ ಸೀಸ್” ಇದು ಕೂಡ ಪ್ರಪಂಚದ ಅತಿ ದೊಡ್ಡ ಪ್ಯಾಸೆಂಜರ್ ಶಿಪ್ ಗಳಲ್ಲಿ ಒಂದು, ಇದನ್ನು ಸಹ ಕೆರೆಬಿಯನ್ ಕಂಪನಿ ನಿರ್ಮಿಸಿದೆ. ಇದರ ತೂಕ ಸುಮಾರು 226000 ಟನ್ಸ್, ಉದ್ದ 360 ಮೀಟರ್, ಎತ್ತರ 66 ಮೀಟರ್, ಇದರಲ್ಲಿ ಒಂದೇ ಬಾರಿ 6500 ಜನ ಪ್ರಯಾಣಿಸಬಹುದು. ಅದೇರೀತಿ ಇದರಲ್ಲಿ 2200 ಕೆಲಸಗಾರರಿದ್ದಾರೆ. ಇದು ಗಂಟೆಗೆ 46 ಕಿ ಮಿ ವೇಗದಲ್ಲಿ ಚಲಿಸುತ್ತದೆ. ಇದರಲ್ಲಿ ಐಶರಾಮಿ ಹೋಟೆಲ್ಸ್ ಸಿನಿಮಾ ಥೇಟರ್ 23 ಸ್ವಿಮ್ಮಿಂಗ್ ಪೂಲ್, ಪಾರ್ಕ್ ಈ ರೀತಿ ಹತ್ತು ಹಲವಾರು ಸೌಕರ್ಯಗಳು ಇವೆ. ಇದರ ನಿರ್ಮಾಣಕ್ಕೆ ಸುಮಾರು 1.3 ಬಿಲಿಯನ್ ಹಣ ವೆಚ್ಚ ಮಾಡಿದ್ದಾರೆ.

“ಅಲ್ಲೂರಿ ಆಫ್ ದ ಸೀಸ್” ಇದನ್ನು ಕೂಡ ರಾಯಲ್ ಕೆರೆಬಿಯನ್ ಕಂಪನಿಯವರೇ ನಿರ್ಮಿಸಿದ್ದಾರೆ. ಇದರ ಉದ್ದ 360 ಮೀಟರ್ ಎತ್ತರ 72 ಮೀಟರ್ ಇದರ ತೂಕ 224000 ಟನ್ ಇದರಲ್ಲಿ ಒಂದೇ ಬಾರಿ 5600 ಜನ ಪ್ರಯಾಣಿಸಬಹುದು, ಅದೇ ರೀತಿ ಇದರಲ್ಲಿ 2100 ಜನ ಕೆಲಸಗಾರರು ಇರುತ್ತಾರೆ, ಇದರ ವೇಗ ಗಂಟೆಗೆ 41 ಕಿಲೋಮೀಟರ್ ನಿರ್ಮಿಸಲು 1.2 ಬಿಲಿಯನ್ ಹಣವನ್ನು ವೆಚ್ಚ ಮಾಡಿದ್ದಾರೆ. ಇದನ್ನು ಸಮುದ್ರದಲ್ಲಿರುವ ಸ್ವರ್ಗ ಅಂತಾನೆ ಕರೀತಾರೆ. ಇದರಲ್ಲಿ ಹೋಟೆಲ್ ಸ್ವಿಮ್ಮಿಂಗ್ ಪೂಲ್, ಸ್ಕೇಟಿಂಗ್, ಪಾರ್ಕ್ ಈ ರೀತಿ ತುಂಬಾ ಸೌಲಭ್ಯಗಳು ಇವೆ.

“ಓಯಸಿಸ್ ಆಫ್ ದ ಸೀಸ್” ಇದು ನಾಲ್ಕನೇ ಅತಿದೊಡ್ಡ ಪ್ಯಾಸೆಂಜರ್ ಶಿಪ್ ಇದು ಕೂಡ ರಾಯಲ್ ಕೆರೆಬಿಯನ್ ಕಂಪನಿಗೆ ಸೇರಿದ ಹಡಗು. ಇದರ ಉದ್ದ 361 ಮೀಟರ್ ಎತ್ತರ 72 ಮೀಟರ್ ತೂಕ 226000 ಟನ್ ಇದರಲ್ಲಿ ಒಂದೇ ಬಾರಿಗೆ 5400 ಜನ ಪ್ರಯಾಣಿಸಬಹುದು, ಅದೇರೀತಿ ಇದರಲ್ಲಿ 2500 ಜನ ಕೆಲಸಗಾರರಿದ್ದಾರೆ. ಇದು ಗಂಟೆಗೆ 45 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುತ್ತದೆ. ಇದರ ನಿರ್ಮಾಣಕ್ಕೆ ಸುಮಾರು 1.4 ಮಿಲಿಯನ್ ಹಣವನ್ನು ವೆಚ್ಚ ಮಾಡಿದ್ದಾರೆ. ಇದರಲ್ಲಿ ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಕ್ಲಬ್ ಗಳು, ಬ್ಯಾಸ್ಕೆಟ್ಬಾಲ್ ಕೋರ್ಟ್, ಈ ರೀತಿ ತುಂಬಾ ಸೌಲಭ್ಯಗಳು ಇವೆ.

ಕೊನೆಯದಾಗಿ *ಅಯ್ದ ನೋವಾ” ನ್ಯಾಚುರಲ್ ಗ್ಯಾಸ್ ನಿಂದ ನಡೆಯುವ ಮೊಟ್ಟಮೊದಲ ಪ್ಯಾಸೆಂಜರ್ ಹಡಗು ಇದಾಗಿದೆ 337 ಮೀಟರ್ ಉದ್ದ,, ಎತ್ತರ 69 ಮೀಟರ್, ತೂಕ 183000 ಟನ್, ಇದರಲ್ಲಿ ಒಂದೇ ಬಾರಿಗೆ 6600 ಜನ ಪ್ರಯಾಣಿಸಬಹುದು, ಗಂಟೆಗೆ 43 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುತ್ತದೆ. ಇದರ ನಿರ್ಮಾಣಕ್ಕೆ ಸುಮಾರು 950 ಮಿಲಿಯನ್ ಡಾಲರ್ ವೆಚ್ಚಮಾಡಲಾಗಿದೆ. ಅದರಲ್ಲಿ ವಾಟರ್ ಪಾರ್ಕ್ ಸ್ವಿಮ್ಮಿಂಗ್ ಪೂಲ್ ನೈಟ್ ಕ್ಲಬ್ಸ್, ತುಂಬಾ ಸೌಲಭ್ಯಗಳು ಹಡಗಿನಲ್ಲಿ ಇದೆ. ಪ್ರಪಂಚದ ಅತಿ ದೊಡ್ಡ 5 ನೆ ಪ್ಯಾಸೆಂಜರ್ ಶಿಪ್.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್