ಅಂಬಾನಿ ಮನೆಯ ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಇಡೀ ಪ್ರಪಂಚವಾಯಿತು ಶಾಕ್..!

ಭಾರತದ ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇನ್ನು ಇತ್ತೀಚಿನ ದಿನಗಳಲ್ಲಿ ಜಿಯೋ ಸಿಮ್ ಅನ್ನು ಜಾರಿಗೆ ತಂದ ಮೇಲೆ ಆಟ ಆಡುವ ಹುಡುಗರಿಂದ, ಹಲ್ಲು ಇಲ್ಲದ ಮುದುಕರವರೆಗೂ ಅಂಬಾನಿ ಯಾರೆಂದು ತಿಳಿದಿದೆ. ಯುವಪೀಳಿಗೆ ಅವರಂತೂ ಅವರನ್ನು ಜಿಯೋ ಅಂಬಾನಿ ಎಂದೇ ಕರೆಯುತ್ತಾರೆ. ಅಲ್ಲದೆ ಭಾರತ ದೇಶದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಅವರೇ ಮೊದಲನೇ ಸ್ಥಾನದಲ್ಲಿದ್ದಾರೆ. ಈ ರೀತಿ ಅವರ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳುತ್ತಾರೆ, ಆದರೆ ಅವರ ಮನೆಯ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ.

ಮುಕೇಶ್ ಅಂಬಾನಿ ರವರ ಮನೆ ಬರೋಬ್ಬರಿ 27 ಮಹಡಿಗಳನ್ನು ಹೊಂದಿದ್ದು, ಸುಮಾರು 4 ಲಕ್ಷ ಚದುರ ಅಡಿ ಇದೆ, ಇನ್ನು ಈ ಮನೆಯನ್ನು ನಿರ್ಮಾಣ ಮಾಡಿರುವವರು ಚಿಕಾಗೋದ ವಿನ್ಯಾಸಗಾರ ರಾಗಿದ್ದಾರೆ. ಸ್ನೇಹಿತರೆ ನಿಮಗೆ ಗೊತ್ತಿರುವುದಿಲ್ಲ ಮುಕೇಶ್ ಅಂಬಾನಿ ಅವರ ಮನೆ ಹೇಗೆ ನಿರ್ಮಾಣವಾಗಿದೆ ಎಂದರೆ ಈ ಮನೆ ಯಾವುದೇ ಪ್ರಕೃತಿ ವಿಕೋ’ಪಕ್ಕೆ ತುತ್ತಾಗುವುದಿಲ್ಲ, ಅದು ಭೂಕಂಪದಲ್ಲಿ ಅಥವಾ ಪ್ರಹವನೆ ಆಗಿರಲಿ. ಈ ಮನೆಗೆ ಯಾವುದೇ ರೀತಿಯ ಕಿಂಚಿತ್ತು ತೊಂದರೆಯಾಗುವುದಿಲ್ಲ. ಇನ್ನು ಈ ಮನೆಯ 27 ಅಂತಸ್ತುಗಳಲ್ಲಿ ಎಲ್ಲಾ ಅಂತಸ್ತುಗಳು ಕೂಡ ಬೇರೆ ಬೇರೆ ರೀತಿಯಲ್ಲಿ ವಿನ್ಯಾಸಗೊಂಡಿದೆ.

ಕೆಳಗಿನ ಆರು ಅಂತಸ್ತುಗಳನ್ನು ಕೇವಲ ಕಾರುಗಳ ಪಾರ್ಕಿಂಗ್ ಆಗಿ ಮಾಡಲಾಗಿದೆ ಇದರ ಜೊತೆಗೆ ಮನೆ ಒಳಗಡೆ ಜಿಮ್, ಐಸ್ ಕ್ರೀಮ್ ಪಾರ್ಲರ್, ಯೋಗ ಕೇಂದ್ರ, ಈಜುಕೊಳ, ಚಿತ್ರಮಂದಿರ, ಸ್ಟುಡಿಯೋ ಹೀಗೆ ಹಲವು ರೀತಿಯ ಸೌಕರ್ಯಗಳು ಮುಖೇಶ್ ಅಂಬಾನಿ ಅವರದ್ದಾಗಿದೆ. ಏನು ಈ ಶ್ರೀಮಂತನ ಮನೆಯಲ್ಲಿ ಬರೋಬ್ಬರಿ 600 ಜನ ಕೆಲಸ ಮಾಡುತ್ತಿದ್ದಾರೆ, ಆದರೆ ಇಷ್ಟು ದೊಡ್ಡದಾದ ಮನೆಯಲ್ಲಿ ಕೇವಲ 5 ಜನ ಮಾತ್ರ ವಾಸ ಮಾಡುತ್ತಿದ್ದಾರೆ. ಮುಕೇಶ್ ಅಂಬಾನಿ ಸೇರಿದಂತೆ ಅವರ ಪತ್ನಿ ನೀತು ಅಂಬಾನಿ ಹಾಗೂ ಮೂರು ಮಕ್ಕಳು ಮಾತ್ರ ಮನೆಯಲ್ಲಿ ನೆಲೆಸಿದ್ದಾರೆ.

ಇನ್ನು ಬೇಸಿಗೆ ಸಮಯದಲ್ಲಂತೂ ಮುಂಬೈಯಲ್ಲಿ ಜೀವನ ಮಾಡುವುದು ತುಂಬಾನೇ ಕಷ್ಟ, ಆ ಸಮಯದಲ್ಲಿ ಸಿಕ್ಕಾಪಟ್ಟೆ ಶಕೆ ಇದ್ದು ಜನರೆಲ್ಲಾ ಬೇಸತ್ತು ಹೋಗುತ್ತಾರೆ. ಆದರೆ ಮುಖೇಶ್ ಅಂಬಾನಿಯವರ ಮನೆಯಲ್ಲಿ ಒಂದು ಕೋಣೆಯನ್ನು ನಿರ್ಮಿಸಲಾಗಿದ್ದು ಅದರಲ್ಲಿ ಶಕೆ ಎಂಬುದು ಆಗುವುದಿಲ್ಲ, ಉರಿಯುವ ಬಿಸಿಲಿದ್ದರೂ ಕೂಡ ಆ ಕೋಣೆಯೊಳಗೆ ಹೋಗಿಬಿಟ್ಟರೆ ಚಳಿಗಾಲದ ವಾತಾವರಣ ಅನಾವರಣಗೊಳ್ಳುತ್ತದೆ. ಇನ್ನು ಮನೆ ಸದಸ್ಯರು ದೇವರ ಪೂಜೆ ಮಾಡಲು ದೊಡ್ಡ ದೇವಸ್ಥಾನವನ್ನು ಮನೆಯ ಆವರಣದಲ್ಲಿ ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲದೆ ಮನೆಯ ಮೇಲೆ ಮೂರು ಹೆಲಿಪ್ಯಾಡ್ ಕೂಡ ಇದೆ, ಈ ರೀತಿಯಾದ ವಿಶೇಷತೆಗಳು ಎಲ್ಲ ಮಹಡಿಗಳಲ್ಲು ಇದ್ದು, ಅದೇ ರೀತಿ ಎಷ್ಟು ಜನಗಳಿಗೆ ಒಂದು ಪ್ರಶ್ನೆ ಮೂಡಿರುತ್ತದೆ ಇಷ್ಟು ದೊಡ್ಡ ಮನೆಗೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಎಷ್ಟು ಇರಬಹುದು ಅಂತ, ಪ್ರತಿ ತಿಂಗಳು ಅಂಬಾನಿ ಅವರು ವಿದ್ಯುತ್ ಸಂಸ್ಥೆಗೆ ಎಷ್ಟು ಪಾವತಿಸುತ್ತಾರೆ ಎಂದು ನೀವು ತಿಳಿದರೆ ಶಾಕ್ ಆಗ್ತೀರ. ಈ ಮನೆಯ ಕರೆಂಟ್ ಬಿಲ್ ಒಂದು ತಿಂಗಳಿಗೆ ಸುಮಾರು 71 ಲಕ್ಷ ರೂಪಾಯಿಗಳು. ಇಷ್ಟು ಸವಲತ್ತುಗಳನ್ನು ಹೊಂದಿರುವ ಈ ಮನೆ ಪ್ರಪಂಚದಲ್ಲಿ ಅತಿ ದುಬಾರಿ ಮನೆಯಾಗಿದೆ.