ಉಪಚುನಾವಣೆಯ ಸಂದರ್ಭದಲ್ಲಿ ಶಾಕಿಂಗ್ ಹೇಳಿಕೆ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ !

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ರಾಜ್ಯದ ಎಲ್ಲೆಡೆ ಉಪಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಒಂದೆಡೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಜನಬೆಂಬಲವನ್ನು ಹೊಂದಿರುವ ಮುನಿರತ್ನರ ರವರು ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾಗಿದ್ದರೇ, ಮತ್ತೊಂದೆಡೆ ಡಿಕೆ ಶಿವಕುಮಾರ್ ರವರು ಹೇಗಾದರೂ ಮಾಡಿ ಕುಸುಮ ಅವರನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರ ಕಾರ್ಯವೈಖರಿಯನ್ನು ನೋಡಿರುವ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಜನಪ್ರಿಯ ನಾಯಕ ಜನಾರ್ಧನ ಪೂಜಾರಿ ರವರು ಡಿಕೆ ಶಿವಕುಮಾರ್ ಅವರ ಹಣ ಬಲವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿ, ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಸುಮ ರವರು ಗೆಲ್ಲಲಿದ್ದಾರೆ, ಡಿಕೆ ಶಿವಕುಮಾರ್ ಅವರು ತಮ್ಮ ಹಣಬಲದ ಪ್ರಯೋಗವನ್ನು ಬಳಸಿ, ಹಣ ಹಂಚಿ ಯಾದರೂ ಮುನಿರತ್ನ ಅವರನ್ನು ಸೋಲಿಸುತ್ತಾರೆ ಎಂದು ಹೇಳುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ.

ಇವರ ಹೇಳಿಕೆಯ ಬೆನ್ನಲ್ಲೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ರವರು ಮಾತನಾಡಿ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹೌದು ಸ್ನೇಹಿತರೇ ಶಿರಾ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಬಿಜೆಪಿ ಪಕ್ಷದ ಹಿರಿಯ ನಾಯಕರು ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದರಂತೆಯೇ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ರವರು ಕಾಂಗ್ರೆಸ್ ವಲಯದಲ್ಲಿ ಆತಂಕ ಸೃಷ್ಟಿಸುವಂತಹ ಮಾತುಗಳನ್ನು ಆಡಿದ್ದು ಕಾಂಗ್ರೆಸ್ ಪಕ್ಷದ ಶಾಸಕರು ಈಗಾಗಲೇ ಬಿಜೆಪಿ ಪಕ್ಷ ಸೇರಲು ಸಿದ್ಧರಾಗಿದ್ದಾರೆ.

ಸದ್ಯ ಕಾಂಗ್ರೆಸ್ ಪಕ್ಷದಲ್ಲಿ 71 ಶಾಸಕರಿದ್ದಾರೆ, ಆ 71 ಶಾಸಕರಲ್ಲಿ 5 ಶಾಸಕರು ಈಗಾಗಲೇ ಬಿಜೆಪಿ ಪಕ್ಷದ ಜೊತೆ ಮಾತುಕತೆ ಆರಂಭಿಸಿದ್ದು ಬಿಜೆಪಿ ಪಕ್ಷದ ಸಿದ್ಧಾಂತಗಳಿಗೆ ಒಪ್ಪಿಕೊಂಡು ಬಿಜೆಪಿ ಪಕ್ಷ ಸೇರಲು ಇಚ್ಚೆ ಪಡುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅನುಮಾನ ಮೂಡುವಂತೆ ಮಾಡಿದ್ದಾರೆ. ಇದೆ ಸಮಯದಲ್ಲಿ ಮಾತು ಮುಂದುವರೆಸಿ ಶಿರಾ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಶೀಲರಾಗುತ್ತಾರೆ. ನಮ್ಮ ಸಂಖ್ಯೆ ಇನ್ನೂ ಹೆಚ್ಚಾಗುವ ಮೂಲಕ ಸರ್ಕಾರ ಸುಭದ್ರವಾಗಿದೆ ಎಂದು ಲಕ್ಷ್ಮಣ ಸವದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್