ಇಡೀ ಪ್ರಪಂಚದಲ್ಲಿಯೇ ಇದೊಂದು ಅದ್ಭುತ, ಸ’ತ್ತ ನಂತರವೂ ಬದುಕಿರುವ ಪ್ರಾಣಿಗಳು ಇವೆ ನೋಡಿ..!

ಸ್ನೇಹಿತರೆ ಪ್ರಪಂಚದ ಎಲ್ಲಾ ಪ್ರಾಣಿ-ಪಕ್ಷಿ ಗಳಲ್ಲಿ ಮಾನವನ ದೇಹ ಒಂದು ಅದ್ಭುತ ಅಲ್ಲವೇ, ಮಾನವನು ಹತ್ತಿ ಬುದ್ಧಿವಂತ ಪ್ರಾಣಿ ಕೂಡ ಹೌದು. ಆದರೆ ಒಂದು ಸಣ್ಣ ಶಬ್ದ ಕೇಳಿದರೆ ಭಯಪಡುತ್ತಾರೆ ಗಾಬರಿಯಾಗುತ್ತಾರೆ ಮತ್ತು ಸತ್ತಮೇಲೆ ಮತ್ತೆ ಬದುಕಲು ಕಷ್ಟವೇ ಸರಿ ಈಗಿರುವಾಗ, ಪ್ರಪಂಚದಲ್ಲಿರುವ ಕೋಟ್ಯಂತರ ಪ್ರಾಣಿಗಳಲ್ಲಿ ಕೆಲವು ಜೀವಿಗಳ ಪ್ರಾಣ ಎಷ್ಟು ಸ್ಟ್ರಾಂಗ್ ಆಗಿ ಇರುತ್ತೆ ಅಂದರೆ ದೇಹದ ಭಾಗಗಳು ತುಂಡಾದರು ಅದನ್ನು ಮೆಟ್ಟಿ ನಿಲ್ಲಬಲ್ಲ ಶಕ್ತಿಯನ್ನು ಹೊಂದಿರುತ್ತವೆ ಇಂತಹ ಪ್ರಾಣಿಗಳ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ ..

1)ಆಕ್ಟೋಪಸ್:- ಇದೊಂದು ಸಮುದ್ರಜೀವಿ ಇದು ಎಷ್ಟು ಮೃದುವಾಗಿರುತ್ತದೆ. ಅಷ್ಟೇ ಬುದ್ಧಿವಂತ ಪ್ರಾಣಿ ಕೂಡ ಹೌದು ಇದನ್ನು ಬಂಧಿಸಲು ತುಂಬಾ ಕಷ್ಟ ನೀವು ಇದನ್ನು ಬಂಧಿಸಲು ಪ್ರಯತ್ನ ಮಾಡಿದರೆ, ಇದು ತನ್ನ ಬುದ್ಧಿಯನ್ನು ಪ್ರಯೋಗಿಸಿ ತಪ್ಪಿಸಿಕೊಳ್ಳುತ್ತದೆ. ಅಕ್ಟೋಪಸ್ ಗೆ ಮೂರು ರುದಯ ಗಳಿರುತ್ತವೆ. ಇದಕ್ಕೆ 8 ಕಾಲುಗಳು ಇರುತ್ತವೆ, ಮತ್ತು ಅವುಗಳು ಒಂದೇ ಮೆದುಳಿನ ಮೇಲೆ ಆಧಾರವಾಗಿರುವುದಿಲ್ಲಾ. ಒಂದೊಂದು ಭಾಗವು ಅದರದೇ ಆದ ಮೆದುಳನ್ನು ಹೊಂದಿರುತ್ತದೆ. ಮತ್ತೆ ಸತ್ತ ನಂತರವೂ ಅದರ ಭಾಗಗಳು ಒದ್ದಾಡುತ್ತಿರುತ್ತದೆ. ಈ ವಿಶೇಷತೆಯಿಂದ ಜಪಾನ್ನಲ್ಲಿ ಒಂದು ಡಿಶ್ ಅನ್ನು ತಯಾರಿಸಲಾಗುತ್ತದೆ. ಮತ್ತು ಅದನ್ನು ತಿಂದವರ ಹೊಟ್ಟೆಯಲ್ಲಿ ಅದರ ಅನುಭವ ಕೂಡ ಆಗುತ್ತದೆ.

2)ಸೆಲ ಮಂಡರ್: ಸಲ ಮಂಡರ್ ಅನ್ನೋದು ಒಂದು ಅಲ್ಲಿಯ ಜಾತಿಯ ಜೀವಿ ಇಂತಹ ಕೆಲವು ಜೀವಿಗಳಲ್ಲಿ ಅದರದೇ ಆದ ವಿಶೇಷತೆಗಳು ಇರುತ್ತವೆ. ಅದರ ಕಾಲುಗಳು ಕಳೆದುಕೊಂಡಾಗ ಅದೇ ಜಾಗದಲ್ಲಿ ಹೊಸ ಕಾಲು ಬರುತ್ತದೆ. ಮತ್ತು ದೇಹದಲ್ಲಿ ಇರುವ ಹೃದಯದಲ್ಲಿ ಅಥವಾ ಕಿಡ್ನಿಯಲ್ಲಿ ಏನಾದರೂ ಗಾಯ ಇದ್ದರೆ ಬೇಗನೆ ಗುಣವಾಗುತ್ತದೆ. ಇಂತಹ ವಿಶೇಷಗಳು ಇರುವುದರಿಂದ ವಿಜ್ಞಾನಿಗಳು ಇವುಗಳ ಜೀನ್ಸ್ ಮೇಲೆ ಅಧ್ಯಯನವನ್ನು ಮಾಡುತ್ತಿದ್ದಾರೆ.

3)ಸ್ನೇಕ್: ನಾವೆಲ್ಲರೂ 1 ಹಾವು ಕಾಣಿಸಿದರೆ ಭಯಪಡುತ್ತೇವೆ ಅಲ್ಲಿಂದ ಓಡಿ ಹೋಗ್ತಿವಿ. ಕೆಲವರು ಅದನ್ನು ಸಾಯಿಸಿ ಬಿಡುತ್ತಾರೆ. ಕೆಲವು ಜಾತಿಯ ಹಾವುಗಳು ಅವುಗಳನ್ನು ಕತ್ತರಿಸಿದ ನಂತರ ಕೂಡ ಬದುಕಿರುತ್ತದೆ.ಈ ಹಾವುಗಳ ತಲೆಯ ಮೇಲೆ ಎರಡು ರಂಧ್ರಗಳು ಇರುತ್ತವೆ ಈ ರಂದ್ರಗಳು ವಿವಿಧ ಜಾತಿಯ ಪ್ರಾಣಿಗಳಲ್ಲಿರುವ ಶರೀರದ ಬಿಸಿಯನ್ನು ಕಂಡುಹಿಡಿಯುತ್ತದೆ. ರಾಟಿ ಸ್ನೇಕ್ ನಂತಹ ಅವುಗಳ ತಲೆಯನ್ನು ಎರಡು ಭಾಗ ಮಾಡಿದರೆ. ನಮ್ಮ ಮೇಲೆ ದಾಳಿಯನ್ನು ಮಾಡುತ್ತದೆ. ಅದಕ್ಕೆ ಕೆಲವರು ಹಾವು ಸತ್ತನಂತರ ಭೂಮಿಯಲ್ಲಿ ಮುಚ್ಚುತ್ತಾರೆ ಅಥವಾ ಬೆಂಕಿಯಲ್ಲಿ ಸುಡುತ್ತಾರೆ.

4)ಕಾಕ್ರೋಚ್ :ವಿಜ್ಞಾನಿಗಳು ಇವುಗಳನ್ನು 30 ಕೋಟಿ ವರ್ಷಗಳ ಹಿಂದಿನಿಂದ ಭೂಮಿ ಮೇಲಿದೆ ಎಂದು ಹೇಳುತ್ತಾರೆ. ಅಂದರೆ ಡೈನೋಸರ್ ಕಾಲದಿಂದ ಇವೆ ಎಂದು, ಮತ್ತು ಇವುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟರು ಅವುಗಳಮೇಲೆ ಮಂಜುಗಡ್ಡೆ ಇಟ್ಟರು ಸಾಯುವುದಿಲ್ಲ. ಒಂದು ವೇಳೆ ತಲೆ ಕಟ್ಟಾದರು ಸಾಯುವುದು ಒಂದು ವಾರದವರೆಗೂ ಕೂಡ ಆಗುತ್ತದೆ. ಕೆಲವು ದಿನಗಳವರೆಗೂ ತಲೆ ಇಲ್ಲದೆ ಇರಲು ಕಾರಣ ಅದರ ದೇಹದಲ್ಲಿ ಉಸಿರಾಡುವ ವ್ಯವಸ್ಥೆ ಶ್ವಾಸಕೋಶ ಮತ್ತು ತಲೆಯಲ್ಲಿ ಇರುವುದಿಲ್ಲ. ದೇಹದಲ್ಲಿ ಇರುವ ಸಣ್ಣ ಸಣ್ಣ ರಂಧ್ರಗಳಿಂದ ಅವು ಉಸಿರಾಡುತ್ತದೆ. ಇನ್ನು ಇದೆ ರೀತಿಯ ಅಲವಾರು ಪ್ರಾಣಿಗಳು ಭೂಮಿಮೇಲೆ ಇವೆ ಇದಿಷ್ಟು ಕೆಲವೇ ಕೆಲವು ಪ್ರಾಣಿಗಳ ಮಾಹಿತಿ ಅಷ್ಟೆ