ಭಾರತಕ್ಕೆ ಭರ್ಜರಿ ಸಿಹಿಸುದ್ದಿ ! ಚೀನಾಗೆ ಪಾಠ ಕಲಿಸಲು ಮಹತ್ವದ ಆದೇಶ ಹೊರಡಿಸಿದ ಜಪಾನ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಒಂದು ಕಡೆ ಚೀನಾ ದೇಶ ಸೇರಿದಂತೆ ವಿಶ್ವದ ಇನ್ನಿತರ ಹಲವಾರು ದೇಶಗಳು ಕೋರೋನ ಕಾರಣದಿಂದಾಗಿ ಉದ್ಯೋಗ ನಷ್ಟ ಸೇರಿದಂತೆ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಅನುಭವಿಸುತ್ತಿವೆ. ಇನ್ನು ಭಾರತದಲ್ಲಿ ಜಿಡಿಪಿ ಹಿಂದೆಂದೂ ಕಾಣದಂತಹ ಮಟ್ಟಕ್ಕೆ ಕುಸಿದಿದ್ದರೂ ಕೂಡ ಹಲವಾರು ದಿನಗಳ ಲಾಕ್ಡೌನ್, ಇಡೀ ದೇಶಕ್ಕೆ ಉಚಿತ ರೇಶನ್, ಪ್ರವಾಹ ಪರಿಹಾರ ಗಳು ಇದಕ್ಕೆ ಕಾರಣ ಆದರೆ ಸಣ್ಣ ಕೈಗಾರಿಕಾ ಉದ್ಯಮಗಳಿಗೆ ಸಹಾಯವಾಗುವಂತಹ ಯೋಜನೆಗಳು ಸೇರಿದಂತೆ ವಿಶೇಷವಾದ ಆರ್ಥಿಕ ಪ್ಯಾಕೇಜುಗಳನ್ನು ಘೋಷಣೆ ಮಾಡಿರುವ ಕಾರಣ ಭಾರತದಲ್ಲಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆರ್ಥಿಕತೆ ಪುಟಿದೇಳೇಲಲಿರುವುದು ಬಹುತೇಕ ಖಚಿತ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇದೇ ಸಮಯದಲ್ಲಿ ಭಾರತವು ಪರಿಸ್ಥಿತಿಗೆ ಅನುಗುಣವಾಗಿ ವಸ್ತುಗಳನ್ನು ತಯಾರಿ ಮಾಡಿ ರಫ್ತಿನಲ್ಲಿ ಕೂಡ ಉತ್ತಮ ಪ್ರದರ್ಶನ ತೋರಿದೆ.

ಕೆಲವೇ ಕೆಲವು ದಿನಗಳ ಹಿಂದೆ ಕೇವಲ ಒಂದು ವೆಂಟಿಲೇಟರ್ ಗಳನ್ನು, PPE ಕಿಟ್ ಗಳನ್ನು ತಯಾರಿ ಮಾಡದ ಭಾರತ ಕೋರೋನ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವೆಂಟಿಲೇಟರ್ ಗಳು ಹಾಗೂ PPE ಕಿಟ್ ಗಳನ್ನು ಇತರ ದೇಶಗಳಿಗೆ ರಫ್ತು ಮಾಡುವಷ್ಟು ಪ್ರಮಾಣದಲ್ಲಿ ತಯಾರಿ ಮಾಡುವ ಮೂಲಕ ತನ್ನ ಜನರ ಕೌಶಲ್ಯ ಹಾಗೂ ಇಲ್ಲಿರುವ ಜನ ಸಂಖ್ಯೆಯನ್ನು ಬಳಸಿಕೊಂಡು ಯಾವುದೇ ವಸ್ತುಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ತಯಾರಿ ಮಾಡಬಹುದು ಎಂಬುದನ್ನು ವಿಶ್ವಕ್ಕೆ ತೋರಿಸಿದೆ. ಅದೇ ಕಾರಣಕ್ಕೆ ಇದೀಗ ಚೀನಾ ದೇಶದಿಂದ ಭಾರತ ದೇಶಕ್ಕೆ ಹಲವಾರು ಕಂಪನಿಗಳು ವಲಸೆ ಬರುತ್ತವೆ, ವಲಸೆ ಬರುತ್ತಿರುವ ಕಂಪನಿಗಳನ್ನು ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ಕಾರ್ಯತಂತ್ರ ಹಾಗೂ ಯೋಜನೆಗಳ ಮೂಲಕ ಸೆಳೆಯುತ್ತಿವೆ. ಇದರಿಂದ ಭಾರತದಲ್ಲಿ ಮತ್ತಷ್ಟು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಭಾರತ ತನ್ನ ಆರ್ಥಿಕತೆಯಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಾಣಲಿದೆ.

ಇನ್ನು ಚೀನಾ ದೇಶದಲ್ಲಿ ನೆಲೆಸಿ ಇದೀಗ ವಲಸೆ ಹೋಗಲು ಬಯಸುತ್ತಿರುವ ರಾಷ್ಟ್ರಗಳಿಗೆ ಕೇವಲ ಭಾರತ ರಾಷ್ಟ್ರ ಮಾತ್ರ ದಾಳ ಉರುಳಿಸಿಲ್ಲ, ಬದಲಾಗಿ ವಿಶ್ವದ ಇನ್ನಿತರ ಹಲವಾರು ರಾಷ್ಟ್ರಗಳು ತೆರಿಗೆ ವಿನಾಯತಿ, ವಿಶೇಷ ಸೌಲಭ್ಯಗಳನ್ನು ಘೋಷಿಸಿ ಕಂಪನಿಗಳಿಗೆ ಆಹ್ವಾನ ನೀಡುತ್ತಿವೆ. ಪ್ರತಿಯೊಂದು ರಾಷ್ಟ್ರಗಳು ತಮ್ಮಲ್ಲಿ ಕಂಪನಿಗಳನ್ನು ಸ್ಥಾಪಿಸಿ ನಿಮಗೆ ವಿಶೇಷವಾದ ಆರ್ಥಿಕ ನೆರವು ನೀಡುತ್ತೇವೆ ಎಂದು ಶೋಷಣೆ ಮಾಡುತ್ತಿವೆ. ಪ್ರತಿಯೊಂದು ರಾಷ್ಟ್ರಗಳು ತಮ್ಮಲ್ಲಿ ಕಂಪನಿಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕತೆ ಉದ್ಯೋಗ ಸೃಷ್ಟಿ ಮಾಡುವ ಆಲೋಚನೆಗಳಲ್ಲಿ ತೊಡಗಿಕೊಂಡಿರುವುದು ಸುಳ್ಳಲ್ಲ. ಆದರೆ ಇನ್ನೊಂದು ವಿಶೇಷ ರೀತಿಯ ಘಟನೆ ನಡೆದಿದೆ, ಖಂಡಿತ ಇದಕ್ಕೆ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲವು ಕು-ತಂತ್ರ ರಾಷ್ಟ್ರಗಳನ್ನು ಹೊರತುಪಡಿಸಿದರೆ ಉಳಿದ ರಾಷ್ಟ್ರಗಳ ಜೊತೆ ಯಾವ ರೀತಿಯ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.

ಹೌದು ಸ್ನೇಹಿತರೇ ನಾವು ಈಗಾಗಲೇ ಹೇಳಿದಂತೆ ಪ್ರತಿಯೊಂದು ರಾಷ್ಟ್ರಗಳು ತೆರಿಗೆ ವಿನಾಯಿತಿ ಹಾಗೂ ಆರ್ಥಿಕ ಉತ್ತೇಜನಗಳನ್ನು ತಮ್ಮಲ್ಲಿಗೆ ಬರುವ ಕಂಪನಿಗಳಿಗೆ ನೀಡುವುದು ಸಾಮಾನ್ಯ. ಆದರೆ ಭಾರತದ ಆಪ್ತ ರಾಷ್ಟ್ರಗಳಲ್ಲಿ ಒಂದಾಗಿರುವ ಜಪಾನ್ ದೇಶವು ಭಾರತ ದೇಶವು ಚೀನಾ ದೇಶಕ್ಕೆ ಡಿಜಿಟಲ್ ಕ್ಷೇತ್ರದಲ್ಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತನ್ನದೇ ಆದ ನಿರ್ಧಾರ ಮಾಡುವ ಮೂಲಕ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತಿದೆ, ಭಾರತಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಚೀನಾ ದೇಶದಿಂದ ಭಾರತಕ್ಕೆ ವಲಸೆ ಹೋಗುವ ಎಲ್ಲಾ ಜಪಾನ್ ಕಂಪನಿಗಳಿಗೆ ಭಾರತ ನೀಡುವ ಆರ್ಥಿಕ ವಿಶೇಷ ಪ್ಯಾಕೇಜನ್ನು ಹೊರತು ಪಡಿಸಿ ಜಪಾನ್ ದೇಶವು ಕೂಡ ಸಬ್ಸಿಡಿ ರೂಪದಲ್ಲಿ ಆರ್ಥಿಕ ಯೋಜನೆಯನ್ನು ಒದಗಿಸುವುದಾಗಿ ಘೋಷಣೆ ಮಾಡಿದೆ.