ಕೊನೆಗೂ ರಾಮಮಂದಿರಕ್ಕೆ ದೇಣಿಗೆ ನೀಡುವ ಮಾಹಿತಿ ಹೊರಬಿತ್ತು ! ನೀವು ದೇಣಿಗೆ ನೀಡಬೇಕು ಹೀಗೆ ಮಾಡಿ !

ನಮಸ್ಕಾರ ಸ್ನೇಹಿತರೇ, ರಾಮ ಮಂದಿರದ ಪರವಾಗಿ ತೀರ್ಪು ಬಂದ ಕ್ಷಣದಿಂದಲೂ ಹಲವಾರು ಜನ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆ ನೀಡಬೇಕು ಎಂದರೇ ಏನು ಮಾಡಬೇಕು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಇದೀಗ ರಾಮ ಮಂದಿರ ನಿರ್ಮಾಣ ಟ್ರಸ್ಟ್ ವತಿಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು, ಭವ್ಯವಾದ ರಾಮ ಮಂದಿರ ನಿರ್ಮಾಣ ಮಾಡಲು ದೇಣಿಗೆ ನೀಡಲು ಆಸಕ್ತಿ ಇರುವ ಯಾವುದೇ ಭಕ್ತರು ದೇಣಿಗೆ ಆನ್ಲೈನ್ ಮೂಲಕ ನೀಡಬಹುದಾಗಿದೆ. ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ದೇಣಿಗೆ ರೂಪದಲ್ಲಿ ನೀಡುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಲು ಮನವಿ ಮಾಡಲಾಗಿದೆ. ಈ ಮೂಲಕ ಹಲವಾರು ದಿನಗಳಿಂದ ಜನರು ಕಾಯುತ್ತಿದ್ದ ಅಕೌಂಟಿನ ವಿವರಗಳು ಹಾಗೂ ಕ್ಯೂಆರ್ ಕೋಡ್ ಅನ್ನು ರಾಮ ಮಂದಿರ ನಿರ್ಮಾಣದ ಟ್ರಸ್ಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.


ಒಂದು ವೇಳೆ ನೀವು ದೇಣಿಗೆ ನೀಡುವ ಆಸಕ್ತಿಯನ್ನು ಹೊಂದಿದ್ದರೆ ನೀವು ಮೇಲಿನ ವಿವರಗಳನ್ನು ಬಳಸಿಕೊಂಡು ಹಣ ವರ್ಗಾವಣೆ ಮಾಡಬಹುದಾಗಿದೆ. (ಖಾತೆಯ ಹೆಸರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ). ಇನ್ನು ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಜನರಿಗೆ ಅನುವು ಮಾಡಿ ಕೊಡಲು ಕ್ಯೂಆರ್ ಕೋಡ್ ಕೂಡ ನೀಡಲಾಗಿದ್ದು, ನೀವು ಫೋನ್ ಪೇ, ಗೂಗಲ್ ಪೇ, ಭೀಮ್‌ ಆಪ್ ಸೇರಿದಂತೆ ಇನ್ಯಾವುದೇ ಯುಪಿಐ ಅಪ್ಲಿಕೇಶನ್ ಗಳಲ್ಲಿ ಮೇಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ನೀವು ಒಂದು ರೂಪಾಯಿ ಯಿಂದ ಹಿಡಿದು ಒಂದು ಕೋಟಿಯ ವರೆಗೂ ದೇಣಿಗೆಯನ್ನು ನೀಡಬಹುದಾಗಿದೆ.