ನದಿಯಲ್ಲಿ ಸ್ನಾನ ಮಾಡುತ್ತಿದ್ದ ಯುವಕರಿಗೆ ಅಚಾನಕ್ ಆಗಿ ಸಿಕ್ಕಿದ್ದೇನು ಗೊತ್ತಾ, ಬೆಚ್ಚಿ ಬಿದ್ದ ಯುವಕರು.

ನಮ್ಮ ಭಾರತದ ದೇಶದ ಸಂಪ್ರದಾಯ ಬಹಳ ಪುರಾತನ ಕಾಲದ್ದು, ಇಲ್ಲಿ ಆಳಿದ ರಾಜಮನೆತನಗಳು, ಮಹಾರಾಜರು, ಕಲೆ ಸಂಸ್ಕ್ರತಿಗೆ ಅಪಾರ ಪ್ರೋತ್ಸಾಹ ನೀಡಿದ್ದರು.ಇನ್ನು ನಮ್ಮ ದೇಶದ ಯಾವುದೇ ಮೂಲೆಯಲ್ಲಿ ಹೋಗಿ ನೋಡಿದರೂ ಕೂಡ ನಿಮಗೆ ದೇವಾಲಯಗಳು ದೊರೆತಯುತ್ತವೆ.ಈ ಆಧುನಿಕ ಯುಗದಲ್ಲಿರುವ ನಮಗೆ ನಮ್ಮ ಹಿಂದಿನ ಸಂಪ್ರದಾಯ ಆಚರಣೆಗಳು ಹಾಗು ಸಂಸ್ಕ್ರತಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಭಾರತ ಭೂಮಿಯಲ್ಲಿ ಅದೆಷ್ಟೋ ವಿಸ್ಮಯಗಳು ನಡೆದು ಹೋಗಿದೆ.

ಇಂತಹ ಈ ಪುಣ್ಯಭೂಮಿಯಲ್ಲಿ ಅಗೆದಷ್ಟೂ ಬಗೆದಷ್ಟೂ ಶಿಲಾ ಶಾಸನಗಳು, ನಾಗರಿಕತೆಯ ಕುರುಹುಗಳು ಆಗಾಗ ದೊರೆಯುತ್ತಲೇ ಇರುತ್ತವೆ. ಇನ್ನು ಇತ್ತೀಚಿಗಷ್ಟೇ ಎಂದಿನಂತೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕೆಲ ಯುವಕರಿಗೆ ಕಾಣಸಿಕ್ಕಿದ್ದೆನು ಗೊತ್ತಾ, ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವಿರಿ. ಹೌದು ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕೆಲ ಯುವಕರಿಗೆ ಕಣ್ಣಿಗೆ ಬಿದ್ದಿದ್ದು ನದಿಯಲ್ಲಿ ಮುಳುಗಿಹೋಗಿದ್ದ ವಿಷ್ಣುವಿನ ದೇವಸ್ಥಾನ ಈಗ ಭಾರಿ ವೈರಲ್ ಆಗಿದೆ.

ಒಡಿಶಾದಲ್ಲಿ ಸುಮಾರು 500 ವರ್ಷಗಳಷ್ಟು ಹಳೆಯದಾದ ದೇವಾಲಯವು ನದಿಯಿಂದ ಹೊರಬಂದ ವಿದ್ಯಮಾನ ಎಲ್ಲರಿಗೆ ಗೋಚರಿಸಿದೆ. ಹೌದು ನದಿಯ ನೀರಿನಲ್ಲೂ ಮುಳುಗಿದ್ದ ದೇವಾಲಯದ ಅವಶೇಷಗಳು ಈಗ ಎಲ್ಲರ ಕಣ್ಣಿಗೆ ಕಾಣಿಸಿವೆ. ಈ ದೇವಾಲಯವು 15 ಅಥವಾ 16 ನೇ ಶತಮಾನಕ್ಕೆ ಸೇರಿದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಭಗವಾನ್ ಗೋಪಿನಾಥ್ ಅವರ ಪ್ರತಿಮೆಗಳು ಇದ್ದವು. ವಿಷ್ಣುವಿನ ರೂಪವೆಂದು ಪರಿಗಣಿಸಲ್ಪಟ್ಟವರು. ಅಲ್ಲಿನ ಸ್ಥಳೀಯರ ಪ್ರಕಾರ ಇಲ್ಲೊಂದು ಪುಟ್ಟ ನಗರವಿತ್ತು ಕಾಲ ಕ್ರಮೇಣವಾಗಿ ಪ್ರವಾಹಕ್ಕೆ ಸಿಲುಕಿ ಈ ನಗರ ಮುಳುಗಡೆ ಆಗಿತ್ತು ಎನ್ನಲಾಗಿದೆ. ಮಹಾನದಿಯ ಹರಿವಿನಿಂದ ಇಲ್ಲಿದ್ದ ನಗರ ಕಣ್ಮರೆಯಾಗಿತ್ತು.

ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ನ ಪುರಾತತ್ವಶಾಸ್ತ್ರಜ್ಞರ ತಂಡವು ಈ ದೇವಾಲಯವನ್ನು ಗುರುತ್ತಿಸಿದ್ದಾರೆ. ಈ ದೇವಾಲಯವು ಸುಮಾರು 60 ಅಡಿ ಎತ್ತರದಲ್ಲಿದೆ ಎಂದು ಪುರಾತತ್ವಶಾಸ್ತ್ರಜ್ಞ ದೀಪಕ್ ಕುಮಾರ್ ನಾಯಕ್ ಹೇಳಿದ್ದಾರೆ. ನದಿಯ ಮೇಲಿರುವ ದೇವಾಲಯದ ತಲೆಯನ್ನು ನೋಡಿದರೆ, ಅದರ ನಿರ್ಮಾಣ ಕಾರ್ಯ ಮತ್ತು ವಾಸ್ತುಶಿಲ್ಪವು 15 ಅಥವಾ 16 ನೇ ಶತಮಾನಕ್ಕೆ ಸೇರಿದೆ ಎಂದು ತೋರುತ್ತದೆ.

ಈ ದೇವಾಲಯ ಕಂಡುಬರುವ ಸ್ಥಳವನ್ನು ಸತ್ಪಥನ ಎಂದು ಕರೆಯಲಾಗುತ್ತದೆ. ಸತ್ಪತನದಲ್ಲಿ ಏಳು ಗ್ರಾಮಗಳು ಇದ್ದವು. ಏಳು ಗ್ರಾಮಗಳು ಭಗವಾನ್ ಗೋಪಿನಾಥನನ್ನು ಪೂಜಿಸುತ್ತಿದ್ದವು. ಅದೇ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು ಎನ್ನಲಾಗಿದೆ. ಸುಮಾರು 150 ವರ್ಷಗಳ ಹಿಂದೆ ನದಿ ತನ್ನ ಹಾದಿಯನ್ನು ಬದಲಾಯಿಸಿತು ಮತ್ತು ಹೆಚ್ಚಿನ ಪ್ರವಾಹ ಉಂಟಾಗಿದೆ ಎಂದು ದೀಪಕ್ ಕುಮಾರ್ ನಾಯಕ್ ಹೇಳಿದ್ದಾರೆ. ಇದರಿಂದಾಗಿ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶವು ಮುಳುಗಿದೆ. ಈ ಘಟನೆ ನಡೆದದ್ದು 19 ನೇ ಶತಮಾನದಲ್ಲಿ. ಗ್ರಾಮಸ್ಥರು ದೇವಾಲಯದಿಂದ ಭಗವಂತನ ವಿಗ್ರಹವನ್ನು ತೆಗೆದುಕೊಂಡು ಬೇರೆ ಸ್ಥಾನದಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಈ ನದಿಯಲ್ಲಿ ಮುಳುಗಿರುವ ಪದ್ಮಾವತಿ ಗ್ರಾಮದ ಸುತ್ತ 22 ದೇವಾಲಯಗಳಿವೆ ಎಂದು ಹತ್ತಿರದ ಜನರು ಹೇಳುತ್ತಾರೆ. ಆದರೆ ಇಷ್ಟು ವರ್ಷಗಳ ನಂತರ ಭಗವಾನ್ ಗೋಪಿನಾಥ್ ದೇವ್ ದೇವಾಲಯದ ಕುರುಹು ಕಾಣಿಸಿಕೊಂಡಿರುವುದು ಅದ್ಭುತವಾಗಿದೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್