ನೀರಿಗೆ ಬಿದ್ದ ಮೊಬೈಲ್ ಅನ್ನು ಮನೆಯಲ್ಲೇ ಹೇಗೆ ಸರಿ ಮಾಡಬಹುದು ಗೊತ್ತಾ, ಈ ಅದ್ಬುತ ಟ್ರಿಕ್ ಬಳಸಿ.

ಇದು ಡಿಜಿಟಲ್ ಯುಗ ಆಗಿರುವುದರಿಂದ ಸಾಮಾನ್ಯವಾಗಿ ಹೆಚ್ಚಿನ ಕೆಲಸಗಳು ಮೊಬೈಲ್ ಮೂಲಕವೇ ಮಾಡಲಾಗುತ್ತದೆ. ಹೀಗಾಗಿ ಈ ಸೋಶಿಯಲ್ ಮೀಡಿಯಾ ಯುಗದಲ್ಲಿ ಮೊಬೈಲ್ ಇಲ್ಲದ ವ್ಯಕ್ತಿ ಇಲ್ಲ ಎನ್ನಬಹುದು, ಪ್ರತಿಯೊಬ್ಬರೂ ಕೂಡ ಒಂದು ಸ್ಮಾರ್ಟ್ ಫೋನ್ ಹೊಂದಿರುತ್ತಾರೆ. ಹೀಗಿರುವಾಗ ಈ ಸ್ಮಾರ್ಟ್ ಫೋನ್ ಗಳು ಬಹಳ ದುಬಾರಿಯೂ ಆಗಿರುತ್ತದೆ ಹಾಗು ಬಜೆಟ್ ಫೋನ್ ಗಳು ಕೂಡ ಆಗಿರುತ್ತವೆ. ಒಮ್ಮೊಮ್ಮೆ ಈ ಫೋನ್ ಗಳನ್ನೂ ಎಷ್ಟೇ ಸುರಕ್ಷತೆಯಿಂದ ನೋಡಿಕೊಂಡರೂ ಕೂಡ ಅವುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ಮೊಬೈಲ್ ನ ಫಿಸಿಕಲ್ ಪಾರ್ಟ್ ಒಡೆದು ಹೋದರೆ ಹೊಸದನ್ನು ಹಾಕಿ ಬದಲಾವಣೆ ಮಾಡಬಹುದು ಆದರೆ ದೊಡ್ಡ ಸಮಸ್ಯೆ ಎದುರಾಗುವುದು ನಮ್ಮ ಫೋನ್ ನೀರಿಗೆ ಬಿದ್ದಾಗ. ಹೌದು ಸಾಮಾನ್ಯವಾಗಿ ಬಜೆಟ್ ರೂಪದ ಫೋನ್ ಗಳು ಯಾವುದು ವಾಟರ್ ಪ್ರೂಫ್ ಆಗಿರುವುದಿಲ್ಲ. ದುಬಾರಿ ಫೋನ್ ಗಳು ನೀರಿನಲ್ಲಿ ಬಿದ್ದರೂ ಕೂಡ ಏನಾಗಲ್ಲ. ಹೀಗಿರುವಾಗ ಒಂದು ವೇಳೆ ಫೋನ್ ನೀರಿನಲ್ಲಿ ಬಿದ್ದಾಗ ನಾವು ಕೂಡಲೇ ಯಾವ ಕ್ರಮಗಳನ್ನು ತಗೆದುಕೊಳ್ಳುವುದರ ಮೂಲಕ ಅದನ್ನು ಸರಿಪಡಿಸಬಹುದು ಮತ್ತು ಅದರಲ್ಲಿನ ಡಾಟಾವನ್ನು ಉಳಿಸಿಕೊಳ್ಳಬಹದೂ ಎನ್ನುವುದರ ಬಗ್ಗೆ ತಿಳಿಯೋಣ.

ಒಂದು ವೇಳೆ ನಿಮ್ಮ ಫೋನ್ ನೀರಿಗೆ ಬಿದ್ದಾಗ ನೀವು ಮೊಬೈಲ್ ಸೆರ್ವಿಸ್ ಸೆಂಟರ್ ಗೆ ಹೋಗದೆ ಈ ಕೆಲಸ ಮಾಡಿದರೆ ಫೋನ್ ಸರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೊದಲನೆಯದಾಗಿ ನಿಮ್ಮ ಸ್ಮಾರ್ಟ್ಫೋನ್ ನೀರಿಗೆ ಬಿದ್ದಾಗ ಅದನ್ನು ಯಾವುದೇ ಕಾರಣಕ್ಕೂ ಬಳಸಬೇಡಿ ಕೂಡಲೇ ಸ್ವಿಚ್ ಮಾಡಿ ಮತ್ತು ಅದರ ಬ್ಯಾಟರಿ ತೆಗೆಯಿರಿ. ಈಗ ಬರುವ ಕೆಲ ಫೋನಗಳ್ಲಲಿ ಬ್ಯಾಟರಿ ತೆಗೆಯುವುದು ಅಸಾಧ್ಯ. ಅಂತ ಸಂದರ್ಭದಲ್ಲಿ ಫೋನ್ ಅನ್ನು ಸ್ವಿಚ್ ಮಾಡಿ. ನೀರಿಗೆ ಬಿದ್ದ ಫೋನ್ ಬಳಸುವುದು ಅಪಾಯಕಾರಿ ಏಕೆಂದರೆ ಅದರಒಳಗೆ ಸರ್ಕ್ಯೂಟ್ ಶಾರ್ಟ್ ಆಗಿರಬಹುದು.

ನೀರಿಗೆ ಬಿದ್ದ ಫೋನನ್ನು ಒಳ್ಳೆ ಕಾಟನ್ ಬಟ್ಟೆಯಿಂದ ಚೆನ್ನಾಗಿ ಒರೆಸಿ. ನಂತರ ಈ ಫೋನಿನ ಎಲ್ಲ ಸಿಮ್ ಕಾರ್ಡ್ ಬ್ಯಾಟರಿ ತೆಗೆದು ಫೋನನ್ನು ಅಕ್ಕಿ ತುಂಬಿದ ಒಂದು ಪೆಟ್ಟಿಗೆಯಲ್ಲಿ ತುಂಬಿಸಿ ಇಡಿ.
ಫೋನನ್ನು ಈ ಪೆಟ್ಟಿಗೆಯಲ್ಲಿ 24 ರಿಂದ 48 ಗಂಟೆಗಳ ಕಾಲ ಇಡಿ. ಈ ಸಮಯದಲ್ಲಿ ಅಕ್ಕಿಯು ಫೋನ್‌ನಲ್ಲಿರುವ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತವೆ. ಈ ಕ್ರಮವನ್ನು ಹಲವು ಮಂದಿ ಕೈಗೊಂಡು ಫೋನ್ ಅನ್ನು ಯಶಸ್ವಿಯಾಗಿ ಸರಿಪಡಿಸಿದ್ದಾರೆ.

ಹೀಗಾಗಿ ತುರ್ತು ಸಂದರ್ಭದಲ್ಲಿ ನೀವು ಈ ಕ್ರಮ ಕೈಗೊಂಡರೆ ಖಂಡಿತವಾಗಿ ನಿಮ್ಮ ಫೋನ್ ಉಳಿಸಿಕೊಳ್ಳಬಹುದು. ಫೋನ್ ಈ ಪೆಟ್ಟಿಗೆಯಿಂದ ತೆಗೆದ ಬಳಿಕ ಆನ್ ಮಾಡಿದಾಗ ಸ್ಟಾರ್ಟ್ ಆಗದಿದ್ದರೆ ನೀವು ಸರ್ವಿಸ್ ಸೆಂಟರ್ ಗೆ ಹೋಗಿ ಸರಿಪಡಿಸಿಕೊಳ್ಳಬಹುದು. ಸಾಮಾನ್ಯವಾಗಿ ನೀರಿನಲ್ಲಿ ಬಿದ್ದ ಫೋನ್ ಡೆಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಈ ಅಕ್ಕಿ ಪೆಟ್ಟಿಯಲ್ಲಿರುವ ಕ್ರಮವನ್ನು ಕೂಡಲೇ ಮಾಡಿದರೆ ಒಳ್ಳೆಯ ಫಲಿತಾಂಶ ಬರಬಹುದು ಎಂದು ಟೆಕ್ಕಿಗಳು ಹೇಳುತ್ತಾರೆ.